‘ಉದ್ಯೋಗಿನಿ ಯೋಜನೆ’ಯಡಿ ರಾಜ್ಯ ಸರ್ಕಾರ ಮಹಿಳೆಯರಿಗೆ 3 ಲಕ್ಷ ಸಾಲ ಹಾಗು 90.000 ರೂ ಸಬ್ಸಿಡಿ
ಸರಕಾರ ಮಹಿಳೆಯರಿಗಾಗಿ ತುಂಬಾ ಯೋಜನೆಗಳನ್ನು ಹಮ್ಮಿಕೊಂಡಿದೆ ಅದರಲ್ಲಿ ಉದ್ಯೋಗಿನಿ ಯೋಜನೆಯು ಒಂದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳಬೇಕು ಅನ್ನುವುದೆ ಈ ಯೋಜನೆ, ಮಹಿಳಾ ಸಬಲೀಕರಣದ ಧ್ಯೇಯ, ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಒದಗಿಸುವುದು, ಇದರಿಂದ ಮಹಿಳಾ ಸಬಲೀಕರಣಕ್ಕೆ ಸಹಾಯ ಆಗುತ್ತದೆ ವ್ಯಾಪಾರ ಕೈಗೊಳ್ಳಲು ಸಬ್ಸಿಡಿ ಒದಗಿಸುತ್ತದೆ ಮತ್ತು ಸ್ವಯಂ ಅವಲಂಬನೆ ಪಡೆಯಬಹುದು. ಜಿಲ್ಲೆಯ ಸರ್ಕಾರಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ. ಖಾಸಗಿ ಸಂಘ ಗಳಿಂದ ಹೆಚ್ಚು ಬಡ್ಡಿದರ ದಲ್ಲಿ ಸಾಲಪಡೆಯುವ ಸಾಲ ಪಡೆಯುವ ಮಹಿಳಾ ಉದ್ಯಮಿಗಳಿಗೆ ಸಹಕರಿಸಲು ಈ ಯೋಜನೆ ಬಹಳ ಉಪಯೋಗಕಾರಿಯಾಗಿದೆ. ಅರ್ಹತೆಮಾನದಂಡ: ಮಹಿಳೆಯರನ್ನು ಉದ್ಯಮಿಯರನ್ನಾಗಿ ಬದಲಾವಣೆ ಮಾಡುವುದು ಈ ಯೋಜನೆಯ ಉದ್ದೇಶ. ವಾರ್ಷಿಕ 1.5 ಲಕ್ಷದವರೆಗೆ ಆದಾಯ ಹೊಂದಿರುವ 55 ವರ್ಷದೊಳಗಿನ ಎಲ್ಲ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನ ಕಾಯಿ, ಅಗರಬತ್ತಿ , ಟಿ ಅಂಗಡಿ , ಜಿಮ್, ಫೋಟೋ ಸ್ಟುಡಿಯೋ ಮುಂತಾದವುಗಳಿಗೆ ಸಾಲ ನೀಡಲಾಗುವುದು.
ಸಾಲ ಪಡೆಯುವ ಬಗೆ ಹೇಗೆ ? ದೇಶದಾದ್ಯಂತ ಇರುವ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಹಾಗೂ ಜಿಲ್ಲಾ ಕೇಂದ್ರ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ಅರ್ಜಿಯನ್ನು ಸ್ವೀಕರಿಸಲಾಗುವುದು…ಈ ಹಿಂದಿನ ಯೋಜನೆಯ ಪಲಾನುಭವಿಗಳಿಗೆ ವಯೋಮಿತಿಯನ್ನು 45 ಕ್ಕೆ ನಿಗದಿಪಡಿಸಲಾಗಿತ್ತು. ಈಗ 55 ರವರಗೆ ಏರಿಸಲಾಗಿದೆ ಜೊತೆಗೆ ವಾರ್ಷಿಕ ಆದಾಯ ಮಿತಿಯನ್ನು 40 ಸಾವಿರ ದಿಂದ 1.5 ಲಕ್ಷಕ್ಕೆ ಏರಿಸಲಾಗಿದೆ …
Comments