ಸಿದ್ದರಾಮಯ್ಯ ವಿರುದ್ಧ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ
ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಅಪಪ್ರಚಾರ ಮಾಡೋಕೆ ಇಳಿದರೆ ಅವರ ಕತೆಯನ್ನು ನಾನು ಬಿಚ್ಚಿಡ್ತೇನೆ. ನನ್ನ ಹತ್ತಿರ ಕೂಡ ಸಿದ್ದರಾಮಯ್ಯ ನವರು ಯಾವಾಗ ಏನ್ ಮಾಡಿದ್ರು ಎಂಬುದರ ಬಗ್ಗೆ ಮಾಹಿತಿ ಇದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,'ಸಿದ್ದರಾಮಯ್ಯ ನನ್ನ ಬಗ್ಗೆ ಒಂದು ವಿಷಯ ಹೇಳಿದರೆ ನಾನು ಅವರ ಬಗ್ಗೆ ಹತ್ತು ವಿಷಯಗಳನ್ನು ಹೇಳುವೆ. ಅವರ ಬಗ್ಗೆ ಅಷ್ಟೊಂದು ವಿಷಯ ಹೇಳುವವರು ಇದ್ರೆ, ಅದು ನಾನೊಬ್ಬನೆ. ಅದಕ್ಕೆ ಅವರಿಗೆ ನನ್ನ ಕಂಡರೆ ಭಯ. ಆದ್ದರಿಂದ ನನ್ನ ಮಾತಿಗೆ ರಿಯಾಕ್ಷನ್ ನೀಡುವುದಿಲ್ಲ' ಎಂದು ಹೇಳಿದ್ದಾರೆ.
Comments