ಬಂಡಾಯ ಶಾಸಕರ ರಾಜಕೀಯ ಜೀವನಕ್ಕೆ ಎಳ್ಳು ನೀರು ಬಿಡಲು ಜೆಡಿಎಸ್ ಸಜ್ಜು..!!

ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದ ಹಿತ ಕಾಪಾಡಿದ, ಪಕ್ಷ ದ್ರೋಹ ಬಗೆದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಸೋಲಿಸುವುದು ತಮ್ಮ ಪಕ್ಷದ ಮುಖ್ಯ ಗುರಿ ಎಂದು ಜೆಡಿಎಸ್ ಪಕ್ಷದ ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಅಕಾಂಕ್ಷಿ ರಾಘವೇಂದ್ರ ತಿಳಿಸಿದ್ದಾರೆ.
ಕೇವಲ ಇಕ್ಬಾಲ್ ಅನ್ಸಾರಿ ಮಾತ್ರವಲ್ಲ ಏಳು ಜನ ರೆಬೆಲ್ ಶಾಸಕರನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವುದು ಜೆಡಿಎಸ್ ಪಕ್ಷದ ಎಲ್ಲ ಮುಖಂಡರ ನಿರ್ಣಯ. ಹೀಗಾಗಿ ಸಾಮೂಹಿಕವಾಗಿ ಏಳು ಜನರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು ಬಳಿಕ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ತಮ್ಮ ಉದ್ದೇಶ ಎಂದರು. ಹೀಗಾಗಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಸಿಕ್ಕರೂ ಅಕಾಂಕ್ಷಿಗಳೆಲ್ಲರೂ ಸಂಘಟಿತರಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಈಗಾಗಲೆ ಚುನಾವಣಾ ತಾಲೀಮು ಎಲ್ಲೆಡೆ ಆರಂಭವಾಗಿದೆ ಎಂದರು.
Comments