ಕ್ಯಾಮೇನಹಳ್ಳಿಯಲ್ಲಿ 50ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಕಾಂಗ್ರೇಸ್ ತೊರೆದು ಶಾಸಕ ಪಿ.ಆರ್ ಸುಧಾಕರ್ ಲಾಲ್ ನೇತೃತ್ವದಲ್ಲಿ ಜೆಡಿಎಸ್ಗೆ ಸೇರ್ಪಡೆ

26 Mar 2018 8:15 PM |
671 Report

ಕೊರಟಗೆರೆ ಮಾ. :- ಕೊರಟಗೆರೆ ಕ್ಷೇತ್ರ ಜೆಡಿಎಸ್ನ ಭದ್ರಕೋಟೆ ಎನ್ನುವುದನ್ನು ಮತ್ತೊಮ್ಮೆ ಸಾಭೀತು ಮಾಡುವ ಸಮಯ ಬಂದಿದೆ ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಆವರಣ ಸೋಮವಾರ ಕಾಂಗ್ರೇಸ್ ಪಕ್ಷದಿಂದ ಕಾರ್ಯಕರ್ತರನ್ನು ಜೆಡಿಎಸ್ಗೆ ಸೇರ್ಪಡೆ ಮಾಡಿಕೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


     ಶಾಸಕನಾಗಿ 5 ವರ್ಷ ಅವಧಿಯನ್ನು ಪೂರೈಸಿದ್ದೇನೆ ಇದಕ್ಕೆ ಅವಕಾಶ ಮಾಡಿಕೊಟ್ಟಂತಹ ಎಲ್ಲಾ ಮತದಾರರಿಗೂ ಚಿರರುಣಿಯಾಗಿದ್ದು ಕ್ಷೇತ್ರದ ಸಮಗ್ರ ಅಭಿವೃದಿಗೆ ನನ್ನ ಪ್ರಮಾಣಿಕ ಪ್ರಯತ್ನ ಮಾಡಿದ್ದು ಈ ಬಾರಿಯೂ ಮತ್ತೆ ನನ್ನ ಮತ್ತು ರಾಜ್ಯದಕ್ಷ ಹೆಚ್.ಡಿ ಕುಮಾರಸ್ವಾಮಿ ತೋಳು ಬಲಪಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
    ತಾಲೂಕು ಜೆಡಿಎಸ್ ಕಾರ್ಯಧ್ಯಕ್ಷ ಜೆ.ಎನ್ ನರಸಿಂಹರಾಜು ಮಾತನಾಡಿ ಇವತ್ತು ರೈತರ ಉಳಿವಿಗಾಗಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ರಾಷ್ಡ್ರೀಯ ಪಕ್ಷಗಳು ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
      ಇದೆ ಸಂದರ್ಭದಲ್ಲಿ ಶಾಸಕರ ಸಂಮುಖದಲ್ಲಿ ಹೊಳವನಹಳ್ಳಿಯ ಸುಮಾರು 50 ಕ್ಕೂ ಹೆಚ್ಚು ಮುಸ್ಲಿಂ ಮುಖಂಡರುಗಳು ಇತರರು ಕಾಂಗ್ರೇಸ್ ಪಕ್ಷ ತೊರೆತು ಜೆಡಿಎಸ್ಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದಶರ್ಿ ಲಕ್ಷ್ಮಣ್, ಯುವ ಘಟಕದ ಅಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್, ತಾಪಂ ಸದಸ್ಯ ಕೆಂಪಣ್ಣ, ಗ್ರಾ.ಪಂ ಸದಸ್ಯ ವೆಂಕಟರೆಡ್ಡಿ, ಆರ್.ಜಿ ಬಸವರಾಜು, ನಯಾಜ್, ಮಾಜಿ ತಾ.ಪಂ ಸದಸ್ಯ ಪ್ರಕಾಶ್, ಮುಖಂಡರಾದ ಹನುಮಂತರಾಯಪ್ಪ, ಕಿಶೋರ್, ನಾಗರಾಜು, ರತ್ನಮ್ಮ, ಸುರೇಶ್, ಮರುಡಪ್ಪ, ಓಒಳೇಶ್ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
 

Edited By

Raghavendra D.M

Reported By

Raghavendra D.M

Comments