ದುಷ್ಕರ್ಮಿಗಳ ಕೃತ್ಯಕ್ಕೆ 20 ಕ್ಕೂ ಹೆಚ್ಚು ತೆಂಗು-ಅಡಿಕೆ ಮರ ಭಸ್ಮ
ಕೊರಟಗೆರೆ ಮಾ. 26:- ಕಿಡಿಗೇಡಿಗಳ ದುಷ್ಕೃತ್ಯಕ್ಕೆ ರೈತಲ ಪಲನೀಡುತ್ತಿದ್ದ 20ಕ್ಕೂ ಹೆಚ್ಚು ತೆಂಗು ಮತ್ತು ಅಡಿಕೆ ಮರ ಸುಟ್ಟು ಭಸ್ಮವಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೊಮ್ಮಲದೇವಿಪುರ ಗ್ರಾಮದ ರೈತ ತಿಮ್ಮಯ್ಯರಿಗೆ ಸೇರಿದ ತೋಟಕ್ಕೆ ದುಷ್ಕರ್ಮಿಗಳ ಬೆಂಕಿ ಹಚ್ಚಿರುವ ಪರಿಣಾಮ ಅವಗಡ ನಡೆದಿದೆ. ಕೊರಟಗೆರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ರೈತ ತಿಮ್ಮಯ್ಯ ಸುಮಾರು 80 ಸಾರಿಕ್ಕೂ ಹೆಚ್ಚಿನ ನಷ್ಟ ಸಂಭವಿಸಿದ್ದು ಸರ್ಕಾರ ನನಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೊರಟಗೆರೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Comments