ಉದ್ಯೋಗಕ್ಕೆ ಪದವಿ ಜೊತೆಗೆ ಕೌಶಲ ಅತ್ಯಾವಶ್ಯಕ: ಮುರುಳೀಧರ್ ಹಾಲಪ್ಪ






ಕೊರಟಗೆರೆ ಮಾ. :- ಕೇವಲ ಪದವಿಯನ್ನು ಗಳಿಸಿದರೆ ಸಾಲದು ಅದಕ್ಕೆ ಪೂರಕವಾಗಿ ಕೌಶಲವನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಕೌಶಲಾಭಿವೃದ್ಧಿ ನಿಗದಮ ಅಧ್ಯಕ್ಷ ಮುರುಳೀಧರ್ ಹಾಲಪ್ಪ ತಿಳಿಸಿದರು. ಪಟ್ಟಣ ದ ಸಕರ್ಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಕೌಶಲಾಭಿವೃದ್ಧಿ ಉದ್ಯಶೀಲನೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಡೆದ ಕೌಶಲಭಾಗ್ಯ ಪೂರ್ವ ತರಬೇತಿ ಶಿಭಿವವನ್ನು ಉದ್ಘಾಟಿಸಿ ಮಾತನಾಡಿದರು.
ಕೌಶಲಾಭಿವೃದ್ಧಿ ನಿಗಮದೊಂದಿಗೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಬದುಕನ್ನು ಕಟ್ಟಿಕೊಳ್ಳಬೇಕು ಯಾರೊಬ್ಬರೂ ನಿರುದ್ಯೋಗಿಗಳಾಗಬಾರದು ಎನ್ನುವುದು ನಿಗಮದ ಕನಸಲಾಗಿದ್ದು ಇದರ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈಗಾಗಲೇ ರಾಜ್ಯದಲ್ಲಿ 'ಕೌಶಲ ಕಾರ್ ಆಫ್' ಗೆ ಚಾಲನೆ ನೀಡಿದ್ದು ಲಕ್ಷಾಂತರ ವಿದ್ಯಾರ್ಥಿಗಳು ಇದಲ್ಲಿ ನಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ತಡ ಮಾಡದೇ ಎಲ್ಲರೂ ನೊಂದಾಯಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಾಲಪ್ಪ, ಉಪನ್ಯಾಸಕರಾದ ಶಿವರಾಜು, ಚೌಡಪ್ಪ, ದಿನೇಶ್ ಕುಮಾರ್, ಸರಸಾ, ವಿನುತಾ, ರಂಜಿತಾ ಸೇರಿದಂತೆ ವಿವಿಧ ಎನ್ ಜಿ ಓ ಗಳ ಮುಖ್ಯಸ್ಥರು, ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ( ಚಿತ್ರ ಇದೆ)
26ಕೆಆರ್ಟಿ ಚಿತ್ರ3:- ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಕೊರಟಗೆರೆ ಪದವಿ ಕಾಲೇಜಿನ ವಿದ್ಯಾಥರ್ಿಗಳೊಂದಿಗೆ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಸೇರಿದಂತೆ ಇತರರು.
Comments