ಕೆರೆಗಳ ರಕ್ಷಣೆ ನಮ್ಮೆಲ್ಲರ ಹೊಣೆ: ವೀರಭದ್ರಶಿವಾಚಾರ್ಯ ಶ್ರೀ

26 Mar 2018 7:48 PM |
433 Report

ಕೊರಟಗೆರೆ ಮಾ. 26:-ನಮ್ಮ ದೇಶದಲ್ಲಿ ಹೆಚ್ಚು ಜನರು ಕೃಷಿಯನ್ನು ನಂಬಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ ಅವರಿಗೆ ಸೂಕ್ತ ರೀತಿಯಲ್ಲಿ ನೀರನ್ನು ಒದಗಿಸುವ ಜವಬ್ದಾರಿ ಸಕರ್ಾರ ಮಾಡಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿಸಿದರು.

     ಪಟ್ಟ ಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಭಾಗದ ರೈತರ ಜೀವನಾಡಿಯಾದ ಕೆರೆಗಳ ಹೂಳೆತ್ತಿ ಕೆರೆಗಳ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖ ಮಠದ ವತಿಯಿಂದ ಸಮಿತಿ ರಚನೆಗೆ ಪೂರ್ವ ಭಾವಿ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
     ಭವಿಷ್ಯದ ದಿನಗಳಲ್ಲಿ ರೈತರ ಜಮೀನುಗಳಿಗೆ ಮತ್ತು ಜೀವಸಂಕುಲಕ್ಕೆ ನೀರು ಉಳಿಯ ಬೇಕಾದರೆ ಕೆರೆಗಳು ಉಳಿಯ ಬೇಕು ಎಂಬ ದೃಷ್ಠಿಯಿಂದ ವಿಶ್ವ ಜಲ ದಿನ ಅಂಗವಾಗಿ ಪ್ರಸಕ್ತ ವರ್ಷದಿಂದ ಬೇಸಿಗೆಯಲ್ಲಿ ಕೆರೆಗಳಲ್ಲಿ ತುಂಬಿರುವ ಹೊಳನ್ನು ತೆಗೆದು ಕೆರೆಗಳನ್ನು ಪುನಶ್ವೇತನಗೊಳಿಸಿ ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ಕೆರೆಯಲ್ಲಿ ನೀರು ಸಂಕ್ಷಣೆ ಮಾಡಿ ಅಂತರ್ಜಲ ಅಭಿವೃಧ್ದಿಪಡಿಸುವ ಕಾರ್ಯಕ್ಕೆ ತಾಲೂಕಿನಲ್ಲಿ ಚಾಲನೆ ನೀಡಲು ಮಠ ಚಿಂತಿಸಿದ್ದು ಎಲ್ಲರೂ ಈ ಕೈಂಕರ್ಯದಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
    ಸಭೆಯಲ್ಲಿ ತಾಲೂಕಿನಲ್ಲಿರುವಂತಹ ಕೆರೆಗಳ ಮಾಹಿತಿ, ನೀರು ಸಂಗ್ರಹಣ ಸಾಮಥ್ಯ, ಎಷ್ಟು ರೈತರಿಗೆ ಇದರಿಂದ ಲಾಭ, ಅಲ್ಲಿನ ಸ್ಥಳೀಯರ ಸಹಕಾರ, ಇತರೆ ಸಂಘಸ್ಥೆಗಳ ಸಹಕಾರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚಚರ್ಿಸಲಾಯಿತು.
    ಸಭೆಯಲ್ಲಿ ಉದ್ಯಮಿ ಹೆಚ್. ಮಹದೇವ್, ಜಿಲ್ಲಾ ಬಿಜೆಪಿ ಕಾರ್ಯದಶರ್ಿ ಎಸ್. ಪವನ್ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಪರ್ವತಯ್ಯ, ಪರಿವರ್ತನ ಸ್ವ-ಸಹಾಯ ಸಂಘದ ಅಧ್ಯಕ್ಷ ಎಸ್. ಶಿವಕುಮಾರ್, ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯ ಕೆ. ಪ್ರದೀಪ್, ಸಿಐಟಿಯು ತಾಲೂಕು ಸಂಚಾಲಕ ಎನ್. ನೌಷಾದ್ ಸೆಹಗನ್, ಸಾಹಿತಿ ಸಿದ್ದಗಿರಿ ನಂಜುಂಡಸ್ವಾಮಿ, ಸಮಾಜ ಸೇವಕ ಜಿ. ಶ್ರೀಪ್ರಸಾದ್,ಪುರುಷೋತ್ತಮ್,ಚಿಕ್ಕೀರಪ್ಪ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments