50 ಸಾವಿರ ಜನ ಕಾರ್ಯಕರ್ತರು ನಿರೀಕ್ಷೆ ಏ.1 ಕ್ಕೆ ಕೊರಟಗೆರೆಯಲ್ಲಿ ವಿಕಾಸ ಪರ್ವ

26 Mar 2018 7:43 PM |
558 Report

ಕೊರಟಗೆರೆ ಮಾ. :- ತಾಲೂಕಿನಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಭೇಟಿಯಲ್ಲಿ ಉತ್ತಮ ಸ್ಪಂಧನೆಯನ್ನು ಕಾರ್ಯಕರ್ತರು ನೀಡಿದ್ದರು ಅದೇ ರೀತಿ ಈ ಭಾರಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಏ.1 ರಂದು ನಡೆಯುವ ವಿಕಾಸ ಪರ್ವಕ್ಕೂ ಹೆಚ್ಚಿನ ಜನರು ಸೇರಬೇಕು ಎಂದು  ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಹೆಚ್.ಕೆ ಮಹಾಲಿಂಗಪ್ಪ ತಿಳಿಸಿದರು.        ಪಟ್ಟಣದ ಹೊರ ವಲಯದಲ್ಲಿರುವ ಭೈಲಾಂಜನೇಯ ದೇವಾಲಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

       ಇಡೀ ರಾಜ್ಯದಲ್ಲೇ ಜೆಡಿಎಸ್ ಪರ ಅಲೆಯಿದ್ದು ಅದೇ ರೀತಿ ಕೊರಟಗೆರೆಯಲ್ಲಿನ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಸಮಾವೇಶ ಸಾಕ್ಷಿಯಾಗಬೇಕಿದ್ದು ಪ್ರತಿಯೊಬ್ಬ ಕಾರ್ಯಕತನೂ  ಸೈನಿಕನಂತೆ ಕಾರ್ಯನಿರ್ವಹಿಸಬೇಕು ಕಾರ್ಯಕರ್ತರೇ ಜೆಡಿಎಸ್ ನ ಬೆಂಬಲ ಇದು ಸಭೀತಾಗಬೇಕಿದೆ ಎಂದರು.

       ರೈತರಿಗೆ ನ್ಯಾಯ ಸಿಗಬೇಕು… ರೈತರು ಎಲ್ಲಾ ಕಷ್ಟಗಳು ನಿವಾರಣೆಯಾಗಬೇಕು… ರೈತರಿಗೋಸ್ಕರ ಮತ್ತು ದೀನ, ದಲಿತರಿಗೆ ಇರುವಂತಹ ಜೆಡಿಎಸ್ ಇದನ್ನ ಪ್ರತಿಯೊಬ್ಬರು ತಿಳಿದು ವಿಕಾಸ ಪರ್ವದಲ್ಲಿ ಪಾಲ್ಗೊಳ್ಳಬೇಕು. ಸಮಾವೇಶದಲ್ಲಿ ಸುಮಾರು 50 ಸಾವಿರ ಜನ ಸೇರುವ ನಿರೀಕ್ಷೆಯಿದ್ದು ಎಲ್ಲಾ ಸಿದ್ದತೆ ಮಾಡಿಕೊಂಡಿರುವುದಾಗಿ   ಶಾಸಕ ಪಿ.ಆರ್ ಸುಧಾಕರ್ ಲಾಲ್ ಮನವಿ ಮಾಡಿದರು.

       ಬಿಎಸ್ ಪಿ ಜಿಲ್ಲಾಧ್ಯಕ್ಷ ದಾಸಪ್ಪ ಮಾತನಾಡಿ  ಎರಡು ಸಮಾಜಿಕ ನೆಲೆಗಟ್ಟಿನಲ್ಲಿರುವ ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್ ಮತ್ತು ಬಿಎಸ್ ಪಿ ಮೈತ್ರಿ ಈ ಬಾರಿ ರಾಜ್ಯದಲ್ಲಿ ಬದಲಾವಣೆಯ ಅಲೆಯನ್ನು ತರುತ್ತಿದೆ ಕೇವಲ ದಲಿತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೇಸ್ ದಲಿತರಿಗೆ ಯಾವುದೇ ನ್ಯಾಯವನ್ನು ದೊರಕಿಸಿಕೊಟ್ಟಿಲ್ಲ ಈ ನಿಟ್ಟಿಯಲ್ಲಿ ಬಿಎಸ್ ಪಿ ಎಲ್ಲಾ  ದಲಿತ ಮತಗಳು ಈ ಬಾರಿ ಜೆಡಿಎಸ್ ಪರವಾಗಲಿವೆ ಎಂದರು.

       ಸಭೆಯಲ್ಲಿ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು, ಉಪಾಧ್ಯಕ್ಷ ಜಿ.ಎಂ ಕಾಮರಾಜು,  ತಾಲೂಕು ಅಲ್ಪಸಖ್ಯಾತರ ಘಟಕ ಅಧ್ಯಕ್ಷ ಕಲೀಂಉಲ್ಲಾ,  ಜೆಡಿಎಸ್ ಪಕ್ತಾರ ಟಿ. ಲಕ್ಷ್ಮೀಶ್,  ತೋವಿನಕೆರೆ ನಾಗರಾಜು,  ತಾಲೂಕು ಜೆಡಿಎಸ್ ಕಾರ್ಯದರ್ಶಿ ಲಕ್ಷ್ಮಣ್, ಎಂಎಫ್ ಮಾಜಿ ತಾಲೂಕು ನಿರ್ದೇಶಕ ಕೆ.ಎಂ ಈಶ್ವರಯ್ಯ,ಹುಲೀಕುಂಟೆ ಗ್ರಾ.ಪಂ ಮಾಜಿ ಅಧ್ಯಕ್ಷ ಹೆಚ್.ಆರ್ ಶ್ರೀಧರ್ ಮಾತನಾಡಿದರು.

       ತಾ.ಪಂ ಸದಸ್ಯ ಕೆಂಪಣ್ಣ,  ಗ್ರಾ.ಪಂ ಸದಸ್ಯ ಶಿವಮಕುಮಾರ್, ಮಾಜಿ ಪ.ಪಂ ಸದಸ್ಯ ಪುಟ್ಟನರಪ್ಪ,ಮುಖಂಡರಾದ ಕೆ. ಗಣೇಶ್, ಲಕ್ಕಣ್ಣ, ಸೈಪುಲ್ಲಾ, ಸಾಧಿಕ್, ಸಿದ್ದರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ( ಚಿತ್ರ ಇದೆ)

 

Edited By

Raghavendra D.M

Reported By

Raghavendra D.M

Comments