ವಿದ್ಯುತ್ ಶಾಟ್ ಸಕ್ಯೂಟ್ ಗುಡಿಸಲು ಬಸ್ಮ
ಕೊರಟಗೆರೆ ಮಾ.26:- ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ವಿದ್ಯುತ್ ಕಂಬದ ಕಿಡಿ ಗುಡಿಸಲಿನ ಮೇಲೆ ಬಿದ್ದು ಗುಡಿಸಲು ಸಂಪೂರ್ಣ ಬಸ್ಮವಾಗಿರುವ ಘಟನೆ ತಾಲೂಕಿನ ವಡ್ಡಗೆರೆ ಗ್ರಾ.ಪಂ ವ್ಯಾಪ್ತಿಯ ಯಲಚಗೆರೆ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಮದ್ಯಾಹ್ನ ಸುಮಾರಿಗೆ ಘಟನೆ ನಡೆದಿದೆ ಗುಡಿಸಲಿನಲ್ಲಿದ್ದ ಲಕ್ಷ್ಮಮ್ಮ ಅವಗಡದ ಬಗ್ಗೆ ಅರಿತು ಗುಡಿಸಲಿನಿಂದ ಹೊರ ಬಂದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ ಸ್ವಂಯಂ ಉದ್ಯೋಗಿಯಾಗಿ ಚಕ್ಕಲಿ, ಕಚ್ಚಾಯ ತಿಂಡಿಗಳನ್ನು ಮಾಡಿ ಮಾರುತ್ತಿದ್ದ ಸಣ್ಣ ವ್ಯಾಪಾರಿ. ಅವಗಡದಿಂದ ಸುಮಾರು ಒಂದ ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ. ಸಮಯಕ್ಕೆ ಸರಿಯಾಗಿ ಬಂದ ಅಗ್ನಿಶಾಮಕ ದಳವರು ಬೆಂಕಿ ನಂದಿಸುವುವಲ್ಲಿ ಯಶಸ್ವಿಯಾಗಿದ್ದು ಹೆಚ್ಚಿನ ಅನಾಹುತವನ್ನು ತಪ್ಪಸಿದ್ದಾರೆ. ಅಗ್ನಿ ನಂಧಿಸುವ ಕಾರ್ಯದಲ್ಲಿ ಸಿಬ್ಬಂದಿಗಳಾದ ಜಯಣ್ಣ.ಸಂಗಪ್ಪ ದುಂಲೋಣಿ. ಪೂಜಾರ ಪರಶುರಾಮ. ಜಯಸಿಂಹ. ನಾಗರಾಜಪ್ಪ ಸೇರಿದಂತೆ ಇತರರು ಇದ್ದರು.
Comments