ಜೆಡಿಎಸ್ ಪಕ್ಷವನ್ನು ಕೆಣಕಿದವರಿಗೆ ತಕ್ಕ ಪಾಠ ಕಲಿಸಲಿರುವ ಕುಮಾರಣ್ಣ




ಏಳು ಶಾಸಕರು ಎರಡು ವರ್ಷಗಳ ಹಿಂದೆಯೇ ನನಗೆ ಟೋಪಿ ಹಾಕಿ, ಈಗ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಜೆಡಿಎಸ್ ನಿರ್ನಾಮ ಮಾಡಲು ಹೊರಟಿದ್ದಾರೆ. ಅವರನ್ನು ಆ ಮಾಗಡಿ ರಂಗನಾಥಸ್ವಾಮಿಯೇ ನೋಡಿಕೊಳ್ಳುತ್ತಾನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಭಿನ್ನಮತೀಯ ಶಾಸಕರ ವಿರುದ್ಧ ಇಲ್ಲಿ ಹರಿಹಾಯ್ದರು.
ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಮಾಗಡಿಯ ಶಾಸಕರು ಜೆಡಿಎಸ್ ಪಕ್ಷ ಇಪ್ಪತ್ತರಿಂದ ನಲವತ್ತು ಸ್ಥಾನ ಗೆಲ್ಲಬಹುದು. ಅದಕ್ಕಿಂತ ಸ್ಥಾನ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಇಲ್ಲಿ ಸೇರಿರುವ ಜೆಡಿಎಸ್ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ ಎಂದರು. ನಮ್ಮನ್ನು ಬಿಟ್ಟು ಹೋದರವರ ಬಗ್ಗೆ ಮಾತನಾಡಿ ಕೆಸರಿನ ಮೇಲೆ ಕಲ್ಲು ಹಾಕಿಕೊಳ್ಳಲು ಇಷ್ಟವಿಲ್ಲ. ಕೆಸರೆಲ್ಲಾ ಇಂದು ದೂರವಾಗಿದ್ದಾರೆ. ಇನ್ನು ರಾಹುಲ್ ಗಾಂಧಿ ಭಾಷಣ ನೋಡಿದರೆ ಅವರು ಸಿದ್ದರಾಮಯ್ಯನವರ ಪಂಜರದ ಗಿಳಿಯಾಗಿದ್ದಾರೆ. ಜೆಡಿಎಸ್ ಎಂದರೆ ಸಂಘ ಪರಿವಾರ ಅಂತಾ ರಾಹುಲ್ ಹೇಳಿದ್ದಾರೆ. ಕಾವೇರಿ ನದಿ ನೀರು ಹರಿಯುವ ಪ್ರದೇಶದಲ್ಲಿ ಬಂದು ಜೆಡಿಎಸ್ ಪಕ್ಷವನ್ನ ಕೆಣುಕಿದ್ದೀರಿ ಎಂದರು. ನನ್ನ ಬಗ್ಗೆ ಸೀರಿಯಲ್ ಆಗಿ ಬಿಡ್ತೀನಿ ಅಂತಾರೆ. ಹಾಗೆ ಬಿಚ್ಚಿಡೋಕೆ ಏನೂ ಇಲ್ಲ. ನಾವು ದೇವೇಗೌಡರ ಮಕ್ಕಳು. ನಮ್ಮದು ಅಂಥದ್ದು ಏನೂ ಇಲ್ಲ. ನಾವು ಯಾವತ್ತೂ, ಯಾರಿಗೂ ಹೆದರಿ ರಾಜಕಾರಣ ಮಾಡಿಲ್ಲ ಹಾಗೂ ಅಧಿಕಾರ ಇರುವವರ ಮುಂದೆ ನಿಮ್ಮ ಹಾಗೆ ಸ್ವಾಭಿಮಾನ ಅಡವಿಟ್ಟು ರಾಜಕೀಯ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗಾಗಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇರುವ ರೈತರ ಸಾಲ ಮನ್ನಾ ಮಾಡುತ್ತೇನೆ. ಇನ್ನು ನನ್ನನ್ನು ಕೆಣಕಬೇಡಿ. ನನ್ನ ನೇತೃತ್ವದಲ್ಲಿ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ಯಾರೂ ತಪ್ಪಿಸುವುದಕ್ಕೆ ಆಗಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
Comments