ಪ್ರಜ್ವಲ್ ಕಾಂಗ್ರೆಸ್'ಗೆ ಬರಲಿ ಎಂದ ಜಮೀರ್'ಗೆ ತಿರುಗೇಟು ಕೊಟ್ಟ ಎಚ್‍ಡಿಕೆ

ಕೆ.ಆರ್.ಪುರದ ಐಟಿಐ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಕಾಸಪರ್ವ ಕಾರ್ಯಕ್ರಮದ ನಂತರ ಪ್ರಜ್ವಲ್ ರೇವಣ್ಣ ಅವರನ್ನೇ ಜೆಡಿಎಸ್ ಪಕ್ಷದಲ್ಲಿ ಬೆಳೆಯಲು ಬಿಡುತ್ತಿಲ್ಲ. ಇನ್ನು ನಮ್ಮನೆಲ್ಲ ಎಲ್ಲಿ ಬೆಳೆಸುತ್ತಾರೆ. ಪ್ರಜ್ವಲ್ ರೇವಣ್ಣ ನಮ್ಮೊಂದಿಗೆ ಬರಲಿ ಕಾಂಗ್ರೆಸ್‍ನಲ್ಲಿ ಬೆಳೆಸುತ್ತೇನೆ ಎಂಬ ಜಮೀರ್ ಹೇಳಿಕೆಯ ಕುರಿತು ಸುದ್ದಿಗಾರರು ಕುಮಾರಸ್ವಾಮಿಯನ್ನು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಪಕ್ಷವನ್ನು ಹಾಳು ಮಾಡಿದ್ದಾಯ್ತು, ಇದೀಗ ಮನೆ ಒಡೆಯುವ ಹೇಳಿಕೆ ನೀಡುತ್ತಿದ್ದಾರೆ ಎಂದು ಜಮೀರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ನಮ್ಮ ಮಕ್ಕಳನ್ನು ಬೆಳೆಸುವುದು ಹೇಗೆ ಅಂತ ಬೇರೆಯವರ ಕೈನಲ್ಲಿ ಹೇಳಿಸಿಕೊಳ್ಳಬೇಕಿಲ್ಲ. ಪಕ್ಷ ಹೊಡೆದು ಇದೀಗ ಮನೆ ಒಡೆಯಲು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಬಡವರು ನೆಮ್ಮದಿ ಜೀವನ ನಡೆಸಲಾಗುತ್ತಿಲ್ಲ, ಮಹಿಳೆ ಧೈರ್ಯವಾಗಿ ಹಗಲಲ್ಲೇ ನಡೆಯಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು. ಕೆ.ಆರ್.ಪುರ ಕ್ಷೇತ್ರದಲ್ಲಿ ಡಿ.ಎ.ಗೋಪಾಲ್‍ರವರನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಮನವಿ ಮಾಡಿದರು. ಜೆಡಿಎಸ್ ಅಭ್ಯರ್ಥಿ ಡಿ.ಎ.ಗೋಪಾಲ್ ಮಾತನಾಡಿ, ದಿ.ಮಾಜಿ ಸಚಿವ ಎ.ಕೃಷ್ಣಪ್ಪ ಅವರು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಬಿಟ್ಟರೆ ಹೆಳಿಕೊಳ್ಳುವ ರೀತಿ ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ದಿಯಾಗಿಲ್ಲ, ಕೇವಲ ರಸ್ತೆ, ಚರಂಡಿ ಹಾಕಿಸಿ ಹಣ ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
Comments