ತೂಬಗೆರೆಪೇಟೆಯಲ್ಲಿ ಮುತ್ಯಾಲಮ್ಮ ಭಕ್ತ ಮಂಡಲಿ 73ನೇ ವಾರ್ಷಿಕೋತ್ಸವ, ಸಂಬ್ರಮದ ರಾಮನವಮಿ, ಆರತಿ ಉತ್ಸವ ನಗರದೆಲ್ಲೆಡೆ







ದೊಡ್ಡಬಳ್ಳಾಪುರದ ತೂಬಗೆರೆಪೇಟೆಯಲ್ಲಿ ನಗರದೇವತೆ ಮುತ್ಯಾಲಮ್ಮ ಭಕ್ತ ಮಂಡಲಿ 73ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು, ಶ್ರೀ ಗಂಗಮ್ಮದೇವಿ, ಶ್ರೀ ಕಾಳಮ್ಮದೇವಿ, ಶ್ರೀ ಮುತ್ಯಾಲಮ್ಮದೇವಿ ಹಾಗೂ ಕುಲದೇವತೆ ಚೌಡೇಶ್ವರಿದೇವಿಯರನ್ನು ಕೂರಿಸಿ ಪೂಜೆ, ಆರತಿ ಮಾಡಲಾಯಿತು. ವಾರ್ಷಿಕೋತ್ಸವದ ವಿಶೇಷವಾಗಿ ದಿನಾಂಕ 23ರಂದು ಪೇಟೆಯ ಎಲ್ಲಾ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು, ಇಂದು ಶ್ರೀರಾಮನವಮಿ ಅಂಗವಾಗಿ ಎಲ್ಲಾ ದೇವತೆಗಳಿಗೆ ಪೇಟೆಯ ಮಹಿಳೆಯರು ಆರತಿಗಳನ್ನು ತಂದು ಬೆಳಗಿದರು, ಎಲ್ಲ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಲಾಯಿತು. ಶ್ರೀರಾಮನವಮಿ ಅಂಗವಾಗಿ ನಗರದ ನೆಲದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ಏರ್ಪಡಿಸಿದ್ದರು, ಬೆಳಿಗ್ಗೆಯಿಂದಲೇ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು.
Comments