ಸಾಮಾಜಿಕ ನ್ಯಾಯದ ಹರಿಕಾರ ಡಾ. ಶ್ರೀ ಶಿವಕುಮಾರಸ್ವಾಮೀಜಿ: ಮಾಜಿ ಶಾಸಕ ಗಂಗಹನುಮಯ್ಯ ಅಭಿಮತ

ಕೊರಟಗೆರೆ ಮಾ. :- ದೀನ ದಲಿತರ, ಅಸಹಾಯಕರ ಆಶಾಕಿರಣವಾಗಿ ಸರ್ವರಿಗೂ ಸಾಮಾಜಿಕವಾಗಿ ತ್ರಿವಿದ ದಾಸೋಹವನ್ನು ನೀಡಿರುವ ಡಾ. ಶ್ರೀ ಶಿವಕುಮಾಸ್ವಾಮೀಜಿಗಳ ಕಾರ್ಯ ಎಲ್ಲರಿಗೂ ಆದರ್ಶಪ್ರಾಯ ಎಂದು ಮಾಜಿ ಶಾಸಕ ಗಂಗಹನುಮಯ್ಯ ತಿಳಿಸಿದರು. ಗುರುವಾರ ರಾತ್ರಿ ಪಟ್ಟ ಣದಲ್ಲಿ ಡಾ. ಶಿವಕುಮಾರಸ್ವಾಮಿಗಳ 111 ನೇ ಜನ್ಮ ದಿನ ಅಂಗವಾಗಿ ಶ್ರೀಗಳ ಪುತ್ತಳಿಯ ಶೋಭಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಏ.1 ಶ್ರೀಗಳ ಜನ್ಮದಿನವಾಗಿದ್ದು ಈ ದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಇದನ್ನು ಸಂತರ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಸಕರ್ಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಪರ್ವತಯ್ಯ ಮಾತನಾಡಿ ಶ್ರೀಗಳು 111 ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಭಕ್ತವೃಂದ ತೀಮರ್ಾನಿಸಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ಪಟ್ಟಣ ದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯ ರಥ ಸಂಚರಿಸಿತು. ಕಾರ್ಯಕ್ರಮದಲ್ಲಿ ಪ.ಪಂ ಉಪಾಧ್ಯಕ್ಷ ಕೆ.ವಿ ಮಂಜುನಾಥ್, ಸದಸ್ಯ ಎಸ್. ಪವನ್ ಕುಮಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ತಿಮ್ಮಜ್ಜ, ಸಿಪಿಐ ಮಹೇಶ್, ಜಗಜ್ಯೋತಿ ವೀರಶೈವ ಲಿಂಗಾಯತ ಸಂಘದ ಪದಾಧಿಕಾರಿಗಳಾದ ಕೆ. ನಾಗರಾಜು, ಕೆ.ಆರ್ ಕಿರಣ್, ಷನ್ಮುಗ, ಉಮೇಶ್, ಮುಖಂಡರಾದ ಕೆ.ಎಂ ಸುರೇಶ್, ಮುಕ್ತಿಯಾರ್,ಕೆ.ಎಂ ಪ್ರವೀಣ್, ಕೆ. ಸಿ. ಶಿವಕುಮಾರ್, ಹೆಚ್. ಉಲ್ಲಾಸ್, ಪ್ರದೀಪ್, ನಟರಾಜ್ ಸೇರಿದಂತೆ ಇತರರು ಇದ್ದರು.
Comments