ಕೊರಟಗೆರೆಗೆಯಲ್ಲಿ 8 ಕೋಟಿ ರೂ ರೈಲ್ವೇ ನಿಲ್ದಾಣ ಶಂಕುಸ್ಥಾಪನೆ ಮಾಡಿದ ಸಂಸದ
ಕೊರಟಗೆರೆ ಮಾ. :- ರಾಜದುರ್ಗ ರೈಲ್ವೇ ಯೋಜನೆ ಆರಂಭವಾಗುವುದೇ ಇಲ್ಲಾ ಎನ್ನುವ ಅನುಮಾನಗಳಿದ್ದವು ಆದರೆ ನಾನು ಸಂಸದನಾಗಿ ನಿರಂತರವಾಗಿ ಒತ್ತಡ ಹೇರಿ ಈಗ ಕಾಮಗಾರಿಗೆ ಗುದ್ದಲಿಪೂಜೆ ಮಾಡುತ್ತಿದ್ದೇನೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ಹೇಳಿದರು.
ಕೊರಟಗೆರೆ ಪಟ್ಟ ಣದ ಬೈಪಾಸ್ ರಸ್ತೆಯಲ್ಲಿರುವ ಮಲ್ಲೇಶಪುರ ಗ್ರಾಮದ ಬಳಿಯಲ್ಲಿನ 8 ಕೋಟಿ ರೂ ರೈಲ್ವೇ ನಿಲ್ದಾಣ ಕಾಮಗಾರಿಗೆ ಸಂಕುಸ್ಥಾಪನೆ ಮಾಡಿ ಮಾತನಾಡಿದರು.
267 ಎಕರೆ ಭೂಮಿ ಯೋಜನೆಗೆ ಸ್ವಾಧೀನಗೊಂಡಿದ್ದು ಇನ್ನು 2 ತಿಂಗಳೊಳಗಾಗಿ 1217 ಎಕರೆ ಭೂಮಿ ಯೋಜನೆಗೆ ಸ್ವಾಧೀನಗೊಳ್ಳಲಿದ್ದು, ಕೇಂದ್ರ ಮತ್ತು ರಾಜ್ಯ ಸಕರ್ಾರದ ಸಹಯೋಗದೊಂದಿಗೆ ನಡೆಯುತ್ತಿದ್ದೆ 23 ಕಿ.ಮೀ ದೂರದ ಹಿರೇಕೊಡ್ಕಲ್ ಗ್ರಾಮದಿಂದ ಹಳಿ ಕಾಮಗಾರಿ ಪ್ರಗತಿಯಲ್ಲಿದ್ದು, ಕೊರಟಗೆರೆ ಮತ್ತು ಮಧುಗಿರಿಯಲ್ಲಿ ಶೀಘ್ರವಾಗಿ ಈ ವರ್ಷದ ಅಂತ್ಯದಲ್ಲಿ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ವರ್ಷದಲ್ಲಿ ತುಮಕೂರು-ರಾಗದುರ್ಗ ರೈಲು ಸಂಚರಿಸಲಿದ್ದು ಯೋಜನೆಯ ಲಾಭವನ್ನು ಕೊರಟಗೆರೆ, ಮಧುಗಿರಿ,ಪಾವಗಡ ಭಾಗಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದರು.
ಸಭೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಮಚಂದ್ರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಅಧ್ಯಕ್ಷ ವಿನಯ್ ಕುಮಾರ್, ರಾಜ್ಯ ತೆಂಗು ಮತ್ತು ನಾರು ನಿಗಮ ಅಧ್ಯಕ್ಷ ವೆಂಕಟಾಚಲಯ್ಯ,ತುಮಕೂರು ಎಪಿಎಂಸಿ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ, ಮಾಜಿ ತಾ.ಪಂ ಸದಸ್ಯ ಗಡ್ಲಹಳ್ಳಿ ರವಿಕುಮಾರ್, ಕೆಡಿಪಿ ಸದಸ್ಯ ಮಯೂರ ಗೋವಿಂದರಾಜು, ಮುಖಂಡರಾದ ರಿಯಾಸತ್ ಹಾಲಿ, ಮುಕ್ತಿಯಾರ್, ನರಸಿಂಹಪ್ಪ, ಅರಕೆರೆ ಸೋಮಶೇಖರ್ ಸೇರಿದಂತೆ ರೈಲ್ವೇ ಅಧಿಕಾರಿಗಳು ಇದ್ದರು. ( ಚಿತ್ರ ಇದೆ)
Comments