ಕಿತ್ತಾಟ ಬಿಡಿ, ಮುನೇಗೌಡರನ್ನ ಗೆಲ್ಲಿಸಿಕೊಂಡು ಬನ್ನಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಕಿವಿಮಾತು






ಇಂದು ನಗರಕ್ಕೆ ಬಂದಿದ್ದ ಜನತಾದಳ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಗುಂಪುಗಾರಿಕೆ ಕಚ್ಚಾಟ ಆಡುವುದನ್ನು ಬಿಟ್ಟು ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ಮುನೇಗೌಡರನ್ನ ಗೆಲ್ಲಿಸಿಕೊಂಡು ಬರಲು ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಸ್ಪಷ್ಠವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಹಳಷ್ಟು ಮುಖಂಡರು ರಾಜ್ಯ ಸರ್ಕಾರದ ಲೋಪಗಳನ್ನು ಹೇಳುವುದು ಬಿಟ್ಟು ಕೇಂದ್ರ ಸರ್ಕಾರವನ್ನು ಟೀಕಿಸಿದರು. ಮುಖಂಡರಾದ ಮುನೇಗೌಡ, ಅಪ್ಪಯ್ಯಣ್ಣ, ವೇಣುಗೋಪಾಲ್, ನರಸಿಂಹಯ್ಯ, ತ.ನ.ಪ್ರಭುದೇವ್, ಲಕ್ಷ್ಮೀಪತಿ, ಶಂಕರಯ್ಯ, ಮುನಿಯಪ್ಪ, ಸತ್ಯನಾರಾಯಣ್, ಜೆಡಿಎಸ್ ನಗರಸಭಾ ಸದಸ್ಯರಾದ ರವಿಕುಮಾರ್, ಶಿವಕುಮಾರ್, ಕೆಂಪರಾಜು, ಗೋವಿಂದರಾಜು ಮತ್ತು ತಾಲ್ಲೂಕಿನ ಕಾರ್ಯಕರ್ತರು ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ದೊಡ್ಡಬಳ್ಳಾಪುರದ ಹಿರಿಯ ರಾಜಕಾರಣಿ ಶ್ರೀ ಜಾಲಪ್ಪನವರನ್ನು ಬೇಟಿಮಾಡಿ ಆರೋಗ್ಯ ವಿಚಾರಿಸಿದರು.
Comments