ಪಕ್ಷ ಬಿಟ್ಟ ಏಳು ಜನರಿಗೆ ಎಚ್ ಡಿ ಕೆ ಹೇಳಿದ್ದೇನು?
ಎಚ್ ಡಿ ಕುಮಾರಸ್ವಾಮಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದು ಹೀಗೆ ಪಕ್ಷ ಬಿಟ್ಟ ಹೇಳು ಜನರು ಗೆದ್ದಿದ್ದು ನಮ್ಮ ಪಕ್ಷದಿಂದ, ನಮ್ಮ ಚಿಹ್ನೆಯಿಂದ. ನಾನೂ ಕೂಡ ಅವರ ಪರವಾಗಿ ಪ್ರಚಾರ ಮಾಡಿದ್ದೇನೆ, ಅವರ ಗೆಲುವಿಗೆ ಶ್ರಮಿಸಿದ್ದೇನೆ. ಪಕ್ಷದ ಕಾರ್ಯಕರ್ತರು ನಿಸ್ವಾರ್ಥವಾಗಿ ಸ್ಥಳೀಯ ವಿರೋಧಿಗಳೊಂದಿಗೆ ಸೆಣಸಿ ಅವರನ್ನು ಗೆಲ್ಲಿಸಿದರು.
ಪಕ್ಷದಿಂದ ಎಲ್ಲವನ್ನು ಪಡೆದ ಅವರಿಂದ ನಾವು ಕನಿಷ್ಠ ಪಕ್ಷ ನಿಷ್ಠೆ ಯನ್ನಷ್ಟೇ ಬಯಸಿದ್ದೆವು. ಆದರೆ ಎರಡು ಚುನಾವಣೆಗಳಲ್ಲಿ ಅವರು ಪಕ್ಷ ದ್ರೋಹ ಬಗೆದಿದ್ದಾರೆ. ರಾಜಕಾರಣಿಗಳು ಪಕ್ಷವನ್ನು ತಾಯಿಯಂತೆ ಭಾವಿಸಬೇಕು. ಆದರೆ ಇವರು ತಾಯಿಯನ್ನೇ ಕಡೆಗಣಿಸಿದರು. ಇವರ ಈ ನಡೆಯಿಂದ ಮುಂದೆ ರಾಜಕಾರಣ, ಶಾಸನ ಸಭೆಗೆ ಪ್ರವೇಶಿಸುವ ಯುವ ಪೀಳಿಗೆಗೆ ಸಿಕ್ಕ ಸಂದೇಶವಾದರೂ ಎಂಥದ್ದು ಎಂಬುದನ್ನು ಈ ಏಳು ಜನರೇ ತೀರ್ಮಾನಿಸಲಿ.
ನಮ್ಮ ಪಕ್ಷವನ್ನು ಒಡೆದವರು, ಒಡೆಯಲೆತ್ನಿಸುತ್ತಿರುವವರನ್ನು ಜನರು ನೋಡುತಿದ್ದು ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡುವರು ಎಂದು ಹೇಳಿದ್ದಾರೆ.
Comments