ಚುನಾವಣೆ ಬಳಿಕ ಸಿಎಂ ಕರ್ಮಕಾಂಡ ಬಯಲು ಮಾಡಲು ಪಣ ತೊಟ್ಟಿರುವ ಎಚ್ ಡಿಕೆ

ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಮಾಡೋದು ಸಂತೆ ಭಾಷಣ. ಅವರು ಯಾವಾಗಲೂ ಗಂಭೀರತೆ ಮರೆತು ಉಡಾಫೆಯಾಗಿ ಮಾತನಾಡುತ್ತಾರೆ ಎಂದರು. ಅನಂತ್‌ಕುಮಾರ್ ಹೆಗಡೆ ಅನೇಕ ಬಾರಿ ಸಂಸದರಾಗಿದ್ದಾರೆ. ತಮ್ಮ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕಾರ್ಖಾನೆ ಆರಂಭಿಸಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಹೆಗಡೆ ಒಬ್ಬ ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಚೆಕ್ ಪಡೆದು ಭ್ರಷ್ಟಾಚಾರ ನಡೆಸಿದ್ದರು. ಈಗ ಸಿದ್ದರಾಮಯ್ಯ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಅಂತ ಹಣ ಪಡೆಯುತ್ತಿದ್ದಾರೆ. ಅದರಲ್ಲಿ ಯಾರಿಗೆ ಎಷ್ಟು ಕೊಡಬೇಕು ಎಂಬುದಕ್ಕೆ ಅನೇಕ ಸಚಿವರನ್ನೇ ಇಟ್ಟುಕೊಂಡಿದ್ದಾರೆ. ಚುನಾವಣೆ ನಂತರ ಇದರ ಕರ್ಮಕಾಂಡ ಹೊರಬರುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುಡುಗಿದರು.
Comments