ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಧಗೆ ತಾಳದೆ ಕೊಲೆ ಸಂಚಿಗೆ ಮುಂದಾದ ಕಾರ್ಪೊರೇಟರ್ ಪತಿ..!!

23 Mar 2018 6:00 PM |
12096 Report

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಶಾಸಕ ಜಮೀರ್ ಅಹ್ಮೆದ್ ಖಾನ್ ಎದುರಾಳಿಯಾಗಿ ಸ್ಪರ್ಧೆ ಮಾಡಲು ತಯಾರಾಗಿದ್ದ ವ್ಯಕ್ತಿಯ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಜೆಡಿಎಸ್‍ನಿಂದ ಸ್ಪರ್ಧೆಗೆ ಸಿದ್ಧವಾಗಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷಾ ರನ್ನು ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು. ಸುಪಾರಿ ಪಡೆದಿದ್ದ ಹಂತಕನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಹಂತಕ ಅಸ್ಲಾಂ ಅಲಿಯಾಸ್ ಹಾವೇರಿ ಅಸ್ಲಾಂ ಬಂಧಿತ ಆರೋಪಿ. ಮತ್ತೊಂದು ವಾರ್ಡ್ ಕಾರ್ಪೋರೇಟರ್ ಪತಿ ಐವತ್ತು ಲಕ್ಷ ರೂಪಾಯಿಗೆ ಹತ್ಯೆಗೆ ಸುಪಾರಿ ನೀಡಿದ್ದ. ಆಗಸ್ಟ್ ನಲ್ಲಿ ಕೊಲೆ ಮಾಡಲು ಹೋಗಿ ಪ್ಲಾನ್ ಪ್ಲಾಫ್ ಆಗಿ ಆರೋಪಿ ಓಡಿ ಹೋಗಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ಒಂದು ವರ್ಷದಿಂದ ಮೋಸ್ಟ್ ವಾಟೆಂಡ್ ಆಗಿದ್ದ ಆರೋಪಿಯನ್ನ ಸದ್ಯ ಬಾಣಾಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಒಂದು ರಿವಾಲ್ವರ್, ಆರು ಸಜೀವ ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Edited By

hdk fans

Reported By

hdk fans

Comments