ತಾಲ್ಲೂಕು ಕಛೇರಿಯಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1039ನೇ ಜಯಂತೋತ್ಸವಕ್ಕೆ ಚಾಲನೆ







ಹತ್ತು ಘಂಟೆಗೆ ತಾಲ್ಲೂಕು ಕಛೇರಿಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1039ನೇ ಜಯಂತೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು, ಶಾಸಕ ವೆಂಕಟರಮಣಯ್ಯ, ತಹಸೀಲ್ದಾರ್ ಮೋಹನ್,ಎಂ.ಜಿ.ಶ್ರೀನಿವಾಸ್, ದೇವಾಂಗ ಮಂಡಲಿ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಜನಾಂಗದ ಪ್ರಮುಖ ಸಂಘಟನೆಗಳಾದ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ, ಮಹಿಳಾ ಸಮಾಜ ಮತ್ತಿತರ ಮುಖ್ಯಸ್ತರು, ಪದಾಧಿಕಾರಿಗಳು ಹಾಜರಿದ್ದರು. ಸಂಜೆ ನಾಲ್ಕು ಘಂಟೆಗೆ ದಾಸಿಮಯ್ಯನವರ ಮೆರಣಿಗೆಯನ್ನು ಏರ್ಪಡಿಸಲಾಗಿತ್ತು, ಮೆರವಣಿಗೆಯಲ್ಲಿ ಜನಾಂಗದ ಎಲ್ಲ ಪ್ರಮುಕರೂ ಹಾಜರಿದ್ದರು, ಮುಕ್ತಾಯ ಸಮಾರಂಭವನ್ನು ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿತ್ತು, ಮೆರವಣಿಗೆ ದಾರಿಯಲ್ಲಿ ಮಹಾಸಭಾ ಮಿತ್ರರು ಅರವಂಟಿಗೆ ಏರ್ಪಡಿಸಿ ಕೋಸಂಬರಿ, ಮಜ್ಜಿಗೆ ಪಾನಕ ವಿತರಣೆ ಮಾಡಿದರು, ಸಂಕಣ್ಣನ ಅವರ ಟ್ರಸ್ಟ್ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಿನಿಮಾ ರಸ್ತೆಯಲ್ಲಿರುವ ಗಾಯಿತ್ರಿಪೀಠ ಮಿತ್ರ ಬಳಗ ವತಿಯಿಂದ ಪೂಜೆ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು, ಮೆರವಣಿಗೆಯಲ್ಲಿ ಬಂದ ಶಾಸಕರಿಗೆ ಹಾರ ಶಾಲು ಹಾಕಿ ಸನ್ಮಾನ ಮಾಡಲಾಯಿತು.
Comments