ನಗರದ ವಿವಿದ ಕಡೆಯಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1039ನೇ ಜಯಂತೋತ್ಸವ ವಿಜೃಂಭಣೆಯಿಂದ ನಡೆಯಿತು
ಬೆಳಿಗ್ಗೆ 9ಕ್ಕೆ ದೇವಾಂಗ ಮಂಡಲಿಯಲ್ಲಿ ಅಭಿಷೇಕ, ಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ಹತ್ತು ಘಂಟೆಗೆ ತಾಲ್ಲೂಕು ಕಛೇರಿಯಲ್ಲಿ ಪೂಜೆ, 11ಘಂಟೆಗೆ ಮುಖ್ಯರಸ್ತೆಯಲ್ಲಿರುವ ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ [ರಿ.] ವತಿಯಿಂದ ನಡೆದ ಪೂಜೆಗೆ ನಗರಸಭಾಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿಸಮಿತಿ ಅಧ್ಯಕ್ಷ ಶಿವಶಂಕರ್, ತೆಲುಗುದೇವಾಂಗ ಸಂಘ ಅಧ್ಯಕ್ಷ ಕೃಷ್ಣಮೂರ್ತಿ ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ಜನಾಂಗದ ಸಂಘಟನೆಗೆ ಶ್ರಮಿಸುತ್ತಿರುವ ಹಲವಾರು ಸಂಘಟನೆಗಳ ಮುಖ್ಯಸ್ತರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಂಕಣ್ಣನವರ ಟ್ರಸ್ಟ್ ಅಧ್ಯಕ್ಷರಾದ ರಾಜಣ್ಣ ವಹಿಸಿದ್ದರು, ಕಾರ್ಯಕ್ರಮವನ್ನು ಕಾರ್ಯದರ್ಶಿ ನಾಗರಾಜ್ ನಿರೂಪಿಸಿದರು, ಜನಾಂಗದ ಪ್ರಮುಖ ಸಂಘಟನೆಗಳ ಮುಖ್ಯಸ್ತರು, ಟ್ರಸ್ಟ್ನ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.
Comments