ಆರಂಭವಾದ ಮೊದಲ ದಿನವೇ ಇಂದಿರಾ ಕ್ಯಾಂಟಿನ್ ಬಂದ್! ಮೀಡಿಯಾದಲ್ಲಿ ಅಪಪ್ರಚಾರ
ನೆನ್ನೆ ಅದ್ದೂರಿಯಾಗಿ ಆರಂಭಿಸಲಾದ ಇಂದಿರಾ ಕ್ಯಾಂಟಿನ್ ಇಂದಿನಿಂದ ಸಾರ್ವಜನಿಕ ಸೇವೆಗೆ ಪ್ರಾರಂಭವಾಯಿತು, ಬೆಳಿಗ್ಗೆ ತಿಂಡಿ ತಿನ್ನಲು ಉತ್ಸಾಹದಿಂದ ಹೋದ ಸಾರ್ವಜನಿಕರಿಗೆ ಸಿಕ್ಕಿದ್ದು ಹಳಸಿದ ಚಿತ್ರಾನ್ನ! ಸಿಬ್ಬಂದಿ ಕೊಟ್ಟ ತಿಂಡಿ ತಿನ್ನಲೂ ಆಗದೆ ಬಿಸಾಡಿ ಶಾಪಹಾಕುತ್ತಾ ಹೊರಬರುತ್ತಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಶುರುವಾಯಿತು, ಏನು ವಿಷಯ ಅಂತ ಖುದ್ದು ಹಾಜರಾಗಿ ವಿಚಾರಿಸಿದಾಗ ಇದೆಲ್ಲಾ ಸ್ಥಳೀಯ ಸಣ್ಣ ಹೋಟೆಲ್ ಮಂದಿ ಹಬ್ಬಿಸಿದ್ದು ಅಂತ ತಿಳಿದು ಬಂತು. ಉಪಹಾರ ಸ್ವೀಕರಿಸುತ್ತಿದ್ದ ಆಟೋ ಮತ್ತು ಬಸ್ ಡ್ರೈವರ್ಗಳು, ಸಾರ್ವಜನಿಕರನ್ನು ವಿಚಾರಿಸಲಾಗಿ ತಿಂಡಿ ಚೆನ್ನಾಗಿದೆ ಎಂದರು.
Comments