ಕಾಂಗ್ರೆಸ್ ನಾಶಕ್ಕೆ ಸಿದ್ದು ವಿರುದ್ಧ ಬಾಂಬ್ ಸಿಡಿಸಿದ ಎಚ್ ಡಿಕೆ
ನೂರು ಜನ ಸಿದ್ದರಾಮಯ್ಯ ಬಂದರೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಇನ್ನೂ ಹತ್ತು ಜನ್ಮ ಹೆತ್ತು ಬಂದರೂ ದೇವೇಗೌಡರ ಮಕ್ಕಳನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಗಾಂಧಿನಗರ ಕ್ಷೇತ್ರದ ಶ್ರೀರಾಂಪುರದಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ನುಡಿದಂತೆ ನೆಡೆದಿದ್ದೇವೆ ಎಂದು ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ಆದರೆ ಅವರು ನುಡಿದಂತೆ ನಡೆದಿಲ್ಲ. ನುಡಿದಂತೆ ಒಡೆದಿದ್ದಾರೆ. ಸಮಾಜ ಒಡೆಯುವದನ್ನು ಇವರಿಂದ ಕಲಿಯಬೇಕು ಎಂದು ಟಾಂಗ್ ನೀಡಿದರು. ದೇವೇಗೌಡರ ಮಕ್ಕಳನ್ನ ರಾಜಕೀಯವಾಗಿ ತೆಗೆಯಬೇಕು ಎಂದು ಸಿಎಂ ಹೇಳಿದ್ದಾರೆ. ಇನ್ನೂ ಹತ್ತು ಜನ್ಮ ಬಂದರೂ ನಮ್ಮನ್ನು ತೆಗೆಯಲು ಸಾಧ್ಯವಿಲ್ಲ. ದೇವೇಗೌಡರ ಮಕ್ಕಳ ಬಗ್ಗೆ ಮಾತನಾಡಲು ನಿಮಗ ನೈತಿಕತೆ ಇಲ್ಲ. ಬಿಜೆಪಿಯ ಬಿ ಟೀಮ್ ಎಂದು ಹೇಳಿದ್ದೀರಿ. ಬಿಜೆಪಿ ಪಕ್ಕದಲ್ಲಿ ನಿಂತು ನಾವು ಕೆಮ್ಮಿದರೆ ಸಾಕು ಕಾಂಗ್ರೆಸ್ ಧೂಳಿಪಟ ಆಗುತ್ತದೆ. ಮಾತನಾಡುವಾಗ ಎಚ್ಚರ ಇರಲಿ ಸಿದ್ದರಾಮಯ್ಯನವರೆ ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನನ್ನ ಬಗ್ಗೆ ಅರ್ಧ ಗಂಟೆ ಮಾತನಾಡಿದರೆ ನಿಮ್ಮ ಬಗ್ಗೆ ಅರ್ಧ ದಿನ ಮಾತನಾಡುತ್ತೇನೆ. ಕಾಂಗ್ರೆಸ್ ಬೆಂಬಲ ನಾನು ಕೇಳುವುದಿಲ್ಲ. ಸಿದ್ದರಾಮಯ್ಯನವರೆ ಜೆಡಿಎಸ್ ಮುಗಿಸ್ತೀನಿ ಅಂತ ಹೇಳುವ ದುರಹಂಕಾರ ಬಿಡಿ. ನಿಮ್ಮಂತಹ ನೂರು ಸಿದ್ದರಾಮಯ್ಯ ಬಂದರೂ ಸಾಧ್ಯವಿಲ್ಲ. ಅಧಿಕಾರ ಇದೆ ಅಂತ ಜನರ ಹಣ ಲೂಟಿ ಹೊಡೆದು ದುರಹಂಕಾರ ಮಾಡಬೇಡಿ. ಮೇ ತಿಂಗಳಲ್ಲಿ ಜನ ಬುದ್ಧಿ ಕಳಿಸುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು. ದೇವೇಗೌಡರು ಮುಖ್ಯಮಂತ್ರಿ ಮಾಡಲಿಲ್ಲ ಅಂತ ಹೇಳುತ್ತೀರಲ್ಲ. ನಿಮ್ಮ ಯೋಗ್ಯತೆಗೆ ಅವರು ಅಬಕಾರಿ ಸಚಿವ ಸ್ಥಾನ ನೀಡಲು ಸಿದ್ಧರಿರಲಿಲ್ಲ. ನಿಮ್ಮ ಮನೆಗೆ ಬಂದು ಕರೆತಂದು ಕ್ಯಾಬಿನೆಟ್‌ಗೆ ಬಿಟ್ಟವರು ಯಾರು?ನಾನು ಸಾಲ ಮಾಡಿ ಜೆಡಿಎಸ್ ಕಾರ್ಯಕ್ರಮ ಮಾಡುತ್ತಿದ್ದೆ. ವೇದಿಕೆ ಮೇಲೆ ಕುಳಿತು ದೇವೇಗೌಡರನ್ನು ಒದ್ದುಕೊಂಡು ಓಡಾಡಿದ್ದೀರಿ ನೀವು. ಯಾವ ರೀತಿ ನಡೆದುಕೊಂಡಿದ್ದೀರಿ ಅಂತ ನೆನಪಿದೆಯಾ ಎಂದು ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
Comments