ಸಿದ್ದು ಗೆ ಇಂದಿನಿಂದ ಶುರುವಾಗಲಿದೆ ಶನಿ ಕಾಟ...!!
ದೇವೇಗೌಡರಿಗೆ 85 ವರ್ಷ ಆಗಿದೆ ಎಂದು ಮಾತನಾಡುವುದಲ್ಲ. ರಾಜಕೀಯ ಅಖಾಡಕ್ಕೆ ಬರಲಿ ನೋಡಿಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಹತ್ತು ಜನಗಳ ಗರಡಿ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ನಾನು ಗರಡಿ ಪೂಜೆ ಮಾಡಿದ ನಂತರವೇ ಚುನಾವಣೆಗೆ ಸ್ಪರ್ಧೆ ಮಾಡಿದ್ದು. ಇದೀಗ ಮತ್ತೆ ಗರಡಿ ಉದ್ಘಾಟನೆ ಮೂಲಕ ರಾಜಕೀಯ ಅಖಾಡ ಆರಂಭವಾಗಿದೆ. ಬನ್ನಿ ಇಲ್ಲಿಂದಲ್ಲೇ ರಾಜಕೀಯ ಅಖಾಡ ಶುರು ಮಾಡೋಣ ಎಂದು ಎಚ್.ಡಿ.ದೇವೇಗೌಡ ಅವರು ಸಿ.ಎಂ ಸಿದ್ದರಾಮಯ್ಯ ಅವರಿಗೆ ಈ ಮೂಲಕ ಖಡಕ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ಬುಧವಾರ ಹಾಸನದಲ್ಲಿ ಬಹಳ ಉದ್ವೇಗದಿಂದ ಮಾತನಾಡಿದ್ದಾರೆ. ಅವರು ಹಾಸನದಲ್ಲಿ ಮಾತನಾಡಿದರೆ ನಾನು ಮೈಸೂರಿನಲ್ಲಿ ಮಾತನಾಡುತ್ತೇನೆ. ಸುಮ್ಮನೇ ಮಾತನಾಡುವುದು ಬಿಟ್ಟು ರಾಜಕೀಯ ಅಖಾಡಕ್ಕೆ ಬರಲಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ರಾಜಕೀಯ ಅಖಾಡಕ್ಕೆ ಆಮಂತ್ರಿಸಿದರು.ನನ್ನ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರವನ್ನು ನೀವು ಗೆಲ್ಲುತ್ತೀರಾ? ನಾನಿನ್ನು ಬದುಕಿದ್ದೇನೆ ಎನ್ನುವುದು ನಿಮಗೆ ನೆನಪಿರಲಿ. ನಿಮ್ಮ ಸೊಕ್ಕು ಮುರಿಯುವ ಶಕ್ತಿ ನನ್ನ ಜಿಲ್ಲೆಯ ಜನರಿಗಿದೆ. ನಿಮ್ಮ ಸೊಕ್ಕು ಮುರಿದು ತೋರಿಸುತ್ತೇನೆ ಎಂದು ಸಿಎಂಗೆ ಬಹಿರಂಗವಾಗಿ ಎಚ್.ಡಿ.ದೇವೇಗೌಡ ಸವಾಲೆಸೆದರು. ಇದೇ ವೇಳೆ ಅವರು ಸಮಾರಂಭದಲ್ಲಿ ಮಾತನಾಡುತ್ತ ತಾವು ದುರಹಂಕಾರ, ಅಧಿಕಾರದ ಮದದಲ್ಲಿ ಮಾತಾಡಬೇಡಿ. ಎಚ್.ಡಿ. ರೇವಣ್ಣರನ್ನ ಸೋಲಿಸಲು ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ. ನೀವು ಎಲ್ಲಿದ್ದೀರಿ, ಎಲ್ಲಿಂದ ಬಂದಿದ್ದೀರಿ ಅಂತಾ ನೆನಪು ಮಾಡಿಕೊಳ್ಳಿ. ಮೈಸೂರು ಜಿಲ್ಲೆ ರಾಜಕಾರಣದ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಬನ್ನಿ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯೋಣಾ, ನಾನು ಸಿದ್ಧನಾಗಿದ್ದೇನೆ, ನೋಡೋಣಾ ಬನ್ನಿ. ಹಾಸನದಲ್ಲಿ ಗೆಲ್ಲುತ್ತೀಯಾ, ನಾನು ಬದುಕಿದ್ದೇನೆ, ನೋಡುತ್ತೀನಿ ಅದು ಯಾವ ರೀತಿ ಗೆಲ್ಲುತ್ತೀಯಾ ಅಂತಾ. ನಿಮ್ಮ ಸೊಕ್ಕು ಮುರಿಯುವ ಶಕ್ತಿ, ಜೀವ ನನ್ನಲಿ ಇದೆ ಅಂತ ಹೇಳಿದರು.
Comments