ಸಿಎಂ ಸಿದ್ದರಾಮಯ್ಯ ವಿರುದ್ಧ ಬಾಂಬ್ ಸಿಡಿಸಿದ ಎಚ್.ಡಿ.ರೇವಣ್ಣ
ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ 24 ಜನ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದರು ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ನಾವು ನಂಜನಗೂಡಲ್ಲಿ ಅಭ್ಯರ್ಥಿ ಹಾಕಿದ್ರೆ ಬಿಜೆಪಿ ಗೆಲ್ಲುತ್ತಿತ್ತು. ಸಿಎಂ ಸ್ವಾರ್ಥಿ ಬೇಕಾದಾಗ ಉಪಯೋಗಿಸಿಕೊಂಡರು. ಸಮಯ ಬಂದಾಗ ಈ ಬಗ್ಗೆ ಮಾತಾಡುತ್ತೇನೆ ಎಂದು ಬಾಂಬ್ ಸಿಡಿಸಿದರು.
ನಾವು ಡೋಂಗಿ ಅಲ್ಲ. ಕಾಂಗ್ರೆಸ್‌ನವರು ಡೋಂಗಿ. ದಲಿತರ ಮೇಲೆ ಕಾಳಜಿ ಇದ್ರೆ ಮುಂದಿನ ಸಿಎಂ ಖರ್ಗೆ ಅಂತ ಸಿಎಂ ಘೋಷಣೆ ಮಾಡಲಿ ನೋಡೋಣ. ದೇವೇಗೌಡರು ಮೀಸಲು ಇಲ್ಲದ ಕಾಲದಲ್ಲೇ ದಲಿತರನ್ನು ಜಿ.ಪಂ. ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದರು. ಮೋದಿ ಹೇಳೋದು ಸರಿ ಇದೆ. ಸಿಎಂಗೆ ತಾಕತ್ತಿದ್ದರೆ ಬ್ರೇಕ್ ಇನ್ಸ್‌ಪೆಕ್ಟರ್ ಆಸ್ತಿ ತನಿಖೆಯಾಗಲಿ. ಸರ್ಕಾರದ ಮುಖ್ಯ ಕಾರ್ಯದರ್ಶಿ ರಬ್ಬರ್ ಸ್ಟಾಂಪ್ ಅವರಿಗೆ ಸೆಂಡಪ್ ಪಾರ್ಟಿ ನೀಡುವುದಾದರೆ ನಾವು ಹೋಗ್ತೇವೆ. ಚುನಾವಣಾ ಆಯೋಗ ಈ ಬಗ್ಗೆ ಗಮನಿಸಬೇಕು. ಸ್ವತಃ ಸಿಎಮ್ ರಾಜಿನಾಮೆ ನೀಡು ಅಂತ ಹೇಳುವಾಗ ಮುಖ್ಯ ಕಾರ್ಯದರ್ಶಿ ಏನ್ ಮಾಡ್ತಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಮನೆಗೆ ಹೋಗೋದು ಒಳಿತು ಎಂದರು. ಮಂಜೇಗೌಡರ ಆಸ್ತಿ 10 ಪಟ್ಟು ಹೆಚ್ಚಿದೆ. ಅವರ ಮೇಲೆ ಲೋಕಾಯುಕ್ತ ಕೇಸ್‌ಗಳಿವೆ. ರಾಹುಲ್ ಗಾಂಧಿಗೆ ನೈತಿಕತೆ ಇದ್ದರೆ ಏಳು ಮಂದಿಯನ್ನು ಬರಬೇಡಿ ಅಂತ ಹೇಳಬೇಕು. ರಾಜೀನಾಮೆ ಕೊಟ್ಟು ಬನ್ನಿ ಅಂತ ಹೇಳಲಿ ಎಂದರು. ಉಪಕಾರ ಮಾಡಿದವರನ್ನು ಮರೆಯೋದು ಕಾಂಗ್ರೆಸ್ ಸಂಸ್ಕೃತಿ. ಮಮತಾ ಬ್ಯಾನರ್ಜಿಗೂ ಟೋಪಿ ಹಾಕಿದ್ರು. ಈ ರಾಜ್ಯದಲ್ಲಿ ನಂಜನಗೂಡು ಸೋತಿದ್ರೆ ಕಾಂಗ್ರೆಸ್ ಪತನ ಆಗೋದು. ನಮ್ಮಲ್ಲಿದ್ದವರನ್ನು ರಾಜ್ಯಸಭೆಗೆ ಬೆಂಬಲಕ್ಕೆ ಯಾಕೆ ಕರೆದುಕೊಂಡರು ಎಂದು ರೇವಣ್ಣ ಪ್ರಶ್ನಿಸಿದರು.
Comments