ಜೆಡಿಎಸ್ ಬಂಡಾಯ ಶಾಸಕರ ರಾಜಕೀಯದ ಭವಿಷ್ಯವನ್ನು ಪೀಕಲಾಟಕ್ಕೆ ಸಿಲುಕಿಸಿದ ದೇವೇಗೌಡ್ರು

ಇಂದು ಬಂಡಾಯ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದ್ದು, ಸ್ಪೀಕರ್ ಕೋಳಿವಾಡ ಅವರ ತೀರ್ಪು ಬಂಡಾಯ ಶಾಸಕರ ಪರವಾಗಿ ಬಂದರೆ ನಿಟ್ಟುಸಿರು ಬಿಡಲಿದ್ದಾರೆ. ಆಕಸ್ಮಿಕವಾಗಿ ಬಂಡಾಯಗಾರರ ವಿರುದ್ಧ ತೀರ್ಪು ಬಂದಲ್ಲಿ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರುವ ಸಂಭವವಿದೆ ಎನ್ನಲಾಗಿದೆ.
ಕೊಪ್ಪಳ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯ ರಾಜಕಾರಣದಲ್ಲಿ ತಮ್ಮ ವಿಶಿಷ್ಟ ರಾಜಕೀಯದ ನಡೆಗಳಿಂದ ಗಮನ ಸೆಳೆದವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ. ಈಗ ಇಕ್ಬಾಲ್ ಅನ್ಸಾರಿ ಸೇರಿದಂತೆ ಜೆಡಿಎಸ್ ಬಂಡಾಯ ಶಾಸಕರ ರಾಜಕೀಯ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದ್ದು, ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವ ಬಂಡಾಯ ಶಾಸಕರ ಗುಂಪಲ್ಲಿ ಶಾಸಕ ಇಕ್ಬಾಲ್ ಅನ್ಸಾರಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಅನರ್ಹತೆಯ ತೂಗುಗತ್ತಿ ರೆಬಲ್ ಶಾಸಕ ಅನ್ಸಾರಿ ಅವರ ತಲೆಯ ಮೇಲೆ ನೇತಾಡುತ್ತಿದೆ. ಹೀಗಾಗಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಮುಂದಿನ ರಾಜಕೀಯ ಭವಿಷ್ಯ ಹಾಗೂ ಅವರ ನಡೆ ಮುಂದೇನಾಗಲಿದೆ ಎಂಬ ಕುತೂಹಲ ಕ್ಷೇತ್ರದಲ್ಲಿ ಜನರಲ್ಲಿದ್ದರೆ, ಶಾಸಕ ಅನ್ಸಾರಿ ಬೆಂಬಲಿಗರು ಮಾತ್ರ ತೀವ್ರ ಆತಂಕದಲ್ಲಿದ್ದಾರೆ. ಇಂದು ಪ್ರಕಟವಾಗಲಿರುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.
Comments