ಪರಮೇಶ್ವರ್ ನಿದ್ದೆಗೆಡಿಸಿದ ಗಂಗಹನುಮಯ್ಯ... ಬಿಜಪಿಯಲ್ಲಿ ಕಂಗಾಲು.....

ಕೊಟಟಗೆರೆ: ಹಿಂದೆ ಜೆಡಿಎಸ್ ಮತ್ತೆ ಬಿಜೆಪಿ ಮತ್ತೆ ಜೆಡಿಎಸ್ ಈಗ ಮತ್ತೆ ಬಿಜೆಪಿಯ ಗಾಳಕ್ಕೆ ಬಿದ್ದಿರುವ ಮಧುಗಿರಿ ಶಾಸಕ ಗಂಗಹನುಮಯ್ಯ ಮತ್ತೊಂದು ರಾಜಕೀಯ ಆಟಕ್ಕೆ ಅಣಿಯಾಗಿದ್ದಾರೆ.
ಮಧುಗಿರಿ ವಿಧಾನ ಸಭಾ ಕ್ಷೇತ್ರದಿಂದ ಹಾಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಗೆ ಸೋಲನ್ನು ನೀಡಿದ್ದ ಗಂಗಹನುಮಯ್ಯ, ನಂತರ ಪರಂ ಎದುರು ಮಧುಗಿರಿಯಲ್ಲಿ ಸೋತರು.... ನಂತರ ಕೊರಟಗೆರೆ ಕ್ಷೇತ್ರಕ್ಕೆ ಪರಂ ಬಂದಾಗ ಮತ್ತೆ ಬಂದು ಪರಂ ಎದುರು ನಿಂತು ಸೋತರೂ.. ನಿರಂತರವಾಗಿ ಪರಂ ಬೆಂಬಿಡದೇ ಕಾಡುತ್ತಿರುವ ಗಂಗಹನುಮಯ್ಯ ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಆಕಾಂಕ್ಷಿಯಾಗಿದ್ದರು ಆದರೆ ಟಿಕೆಟ್ ಸಿಗಲಿಲ್ಲ ಮತ್ತೆ ಈ ಬಾರಿಯೂ ಚುನಾವಣೆಗೆ ನಾನು ನಿಲ್ಲುತ್ತೇನೆ ಎಂದು ಗೌಡರ ಮುಂದೆ ಕೈ ಕಟ್ಟಿನಿಂತರೂ ವರ್ಕ್ ಹೌಟ್ ಹಾಗಲಿಲ್ಲ ಮತ್ತೆ ಬಿಜೆಪಿಯೇ ಸರಿ ಎಂದು ಬೆಂಗಳೂರಿನಲ್ಲಿ ಯಡ್ಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸೇರಿದಂತೆ ನಮಗೆ ಟಿಕೆಟ್ ಎಂದು ಓಡಾಡುತ್ತಿದ್ದವರ ನಿದ್ದೆಯನ್ನು ಕೆಡಿಸಿದ್ದಾರೆ... ಒಟ್ಟಾರೆ ಪರಂ ಮತ್ತು ಬಿಜಪಿಯಲ್ಲಿ ಗಂಗಹನುಮಯ್ಯ ಎಂಟ್ರಿ.. ಕೊಂಚ ತಲೆನೋವಾಗಿದೆ.....
Comments