ಕೊರಟಗೆರೆ ವಿಧಾನ ಸಭಾ ಬಿಜಪಿ ಟಿಕೆಟ್ ಆರತಿಗೆ..!?







ಕೊರಟಗೆರೆ ಮಾ.:- ಕೊರಟಗೆರೆ ವಿಧಾನ ಸಭಾ ಕ್ಷೇತ್ರ ರಂಗು ರಂಗಾಗಿ ಕಾಣುತ್ತಿದ್ದು ಒಂದೆಡೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತೊಂದೆಡೆ ಜೆಡಿಎಸ್ ಹಾಲಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ಗೆ ಸೆಡ್ಡು ಹೊಡೆಯಲು ಬಿಜೆಪಿಯಿಂದ ಯಾರು ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ಅಧಿಕೃತ ಅಭ್ಯರ್ಥಿಯೆನ್ನು ಗೊಷಣೆ ಮಾಡಿಲ್ಲ....
ಈಗಾಗಲೇ ಹಾಲಿ ಜಿ.ಪಂ ಸದಸ್ಯರೂ ಆದ ತಾಲೂಕು ಬಿಜೆಪಿ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ನಾನೇ ಅಭ್ಯರ್ಥಿ ಎನ್ನುತ್ತಿದ್ದರೆ ನಾವೂ ಇದ್ದೇವೆ ಎಂದು ಬಿಜೆಪಿ ಜಿಲ್ಲಾ ವೈಧ್ಯರ ಕೋಷ್ಠಕದ ಸಂಚಾಲಕ ಡಾ. ಲಕ್ಷ್ಮಿಂಕಾತ್ ಒಂದೆಡೆ ಇದ್ದರೆ ಮತ್ತೊಂದೆಡೆ ಮಹಿಳಾ ಅಭ್ಯರ್ಥಿ ಕೋಟಾದಡಿ ಆರತೀ ಕ್ಷೇತ್ರದೆಲ್ಲೆಡೆ ಮಿಂಚಿನ ಸಂಚಾರವನ್ನು ಮಾಡುತ್ತಿದ್ದು ಯಾರು ಹಿತವರು ಈ ಮೂವರೊಳಗೆ ಎನ್ನುವ ಸ್ಥಿತಿ ಬಿಜೆಪಿಯಲ್ಲಿ ನಿರ್ಮಾಣವಾಗಿದೆ.
ಪುಟಿದೇಳುತ್ತಿದ್ದಾರೆ ಆರತಿ
ಈಗಾಗಲೇ ಬಿಜೆಪಿ ವರಿಷ್ಠರೊಂದಿಗೆ ವೈಯಕ್ತಿಕವಾಗಿ ಗುರುತಿಸಿಕೊಂಡಿರುವ ಆರತಿ ಈಗಾಗಲೇ ರಾಜ್ಯದ್ಯಕ್ಷ ಬಿಎಸ್ ವೈ ರೊಂದಿಗೆ ಟಿಕೆಟ್ ಮಾತುಕತೆಯನ್ನು ಆಡಿದ್ದು ಇದಕ್ಕೆ ಪೂರಕವಾದ ಪೋಟೋಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಆರತೀ ನನಗೆ ವರಿಷ್ಠರ ಆಶೀರ್ವದಿಸುತ್ತಾರೆ... ನಾನೇ ಕೊರಟಗೆರೆ ಬಿಜೆಪಿ ಅಭ್ಯರ್ಥಿ... ಅದರಲ್ಲೂ ಜಿಲ್ಲೆಯಲ್ಲಿನ 11 ವಿಧಾನ ಸಭಾ ಕ್ಷೇತ್ರದಲ್ಲಿ ಕನಿಷ್ಟ ಒಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ವರಿಷ್ಠರು ಪ್ರಾತಿನಿಥ್ಯ ನೀಡಿಯೇ ತೀರುತ್ತಾರೆ ನಾನೇ ಅಂತಿಮ ಕಣದದಲ್ಲಿನ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ.. ಒಟ್ಟಾರೆ ಯಾರು ಟಿಕೆಟ್ ತರುತ್ತಾರೆ ಎಂದು ಕಾದು ನೋಡಬೇಕಿದೆ.
Comments