ಶಾಲೆಯ ಅಭಿವೃದ್ಧಿಗೆ ಸರ್ಕಾರದ ಅನುಧಾವನ್ನೇ ಕಾಯಬೇಡಿ ಜಿ.ಪಂ ಸದಸ್ಯ ಲಕ್ಷ್ಮಿನರಸೇಗೌಡ
ಕೊರಟಗೆರೆ ಮಾ.21:- ಸರ್ಕಾರದಿಂದ ಬರುವ ಬರುವ ಅನುಧಾನದಲ್ಲೇ ಅಭಿವೃದ್ಧಿಯನ್ನು ಮಾಡಬೇಕು ಎನ್ನುವುದನ್ನು ಬಿಟ್ಟು ಸ್ಥಳೀಯರ ಸಹಕಾರದೊಂದಿಗೆ ಶಾಲೆಯನ್ನು ಅಭಿವೃದ್ದಿ ಪಡಿಸಬೆಕು ಎಂದು ಜಿ.ಪಂ.ಸದಸ್ಯ ಲಕ್ಷ್ಮೀನರಸೇಗೌಡರು ತಿಳಿಸಿದರು. ತಾಲೂಕಿನ ಗೌರಗೊಂಡನಹಳ್ಳಿ ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ದುರಸ್ತಿಯಾದ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳನ್ನು ಮರೆಯಬಾರದು ತಮ್ಮ ಶಾಲೆಯ ಬಗ್ಗೆ ಪ್ರೀತಿಯನ್ನಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಇದು ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗುತ್ತದೆ ಎಂದರು.
ಮೆಳೇಹಳ್ಳಿ ಡಮರುಗ ಸಂಪನ್ಮೂಲ ಕೇಂದ್ರದ ಉಮೇಶ್ ಮಾತನಾಡಿ ಇಂದು ಇಂಗ್ಲೀಷ್ ಮಾಧ್ಯಮ ಶಾಲೆಗಳ ಹಾವಳಿಯಿಂದಾಗಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದ್ದು ನಗರದ ಶಾಲೆಗಳಲ್ಲಿ ಓದಿದರಷ್ಟೇ ನಮ್ಮ ಮಕ್ಕಳ ಶೈಕ್ಷಣಿಕವಾಗಿ ಸದೃಡರಾಗುತ್ತಾರೆ ಎನ್ನುವ ಮನೋಭಾವ ಪೋಷಕರಲ್ಲಿದ್ದು ಇದರಿಂದ ಹೊರ ಬರಬೇಕು ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಕನ್ನಡ ಶಾಲೆಯಗಳಲ್ಲಿ ಮಕ್ಕಳನ್ನು ಓದಿಸುವಂತಾಗಬೇಕು ಎಂದು ಹೇಳಿದರು.
ಶಾಲೆಯ ಹಳೇ ವಿದ್ಯಾರ್ಥಿಯೂ ಆದ ತೆಂಗಿನ ಚಿಪ್ಪಿನ ಕಲಾವಿದ ಗೌ.ರಾ.ರಾಮಮೂರ್ತಿ ಮಾತನಾಡಿ ನಮ್ಮೂರ ಶಾಲೆಗಳಲ್ಲಿ ಓದಿದ ಋಣ ನಮ್ಮ ಮೇಲಿದೆ, ಆ ಋಣವನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳಬೇಕೆಂಬ ಹಂಬಲ ನಮ್ಮಲ್ಲಿದೆ ಈ ಹಿನ್ನೆಲೆಯಲ್ಲಿ ನಮ್ಮ ಸಂಪಾದನೆಯಲ್ಲಿ ಒಂದಿಷನ್ನು ನಮ್ಮ ಶಾಲೆಯ ಅಭಿವೃದ್ಧಿಗೆ ನೀಡುತ್ತಿದ್ದೇವೆ ಇದು ಮುಂದಿನ ದಿನದಲ್ಲಿ ಇತರರಿಗೆ ಅನುಕರಣೀಯವಾಗಲಿ ಎಂದರು.
ಹಳೇ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶಾಲೆಯಲ್ಲಿ ಮೊದಲ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಶಾಲಾ ಕಟ್ಟಡದ ದುರಸ್ಥಿಗೆ ಸಹಕರಿಸಿದ ಧಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆಸ್ತೂರು ಗ್ರಾ. ಪಂ. ಉಪಾಧ್ಯಕ್ಷೆ ಗೌರಮ್ಮ, ಸದಸ್ಯ ನಾಗರಾಜು, ಶಿಕ್ಷಣ ಇಲಾಖೆಯ ಮಹದೇವಯ್ಯ,ಕೆ. ರಾಜು, ಎಸ್.ಲತಾ ಸೇರಿದಂತೆ ಗ್ರಾಮಸ್ಥರು ಇದ್ದರು. (ಚಿತ್ರ ಇದೆ)
Comments