ಸಂಘಟನೆಗಳಿಂದ ಸಮುದಾಯ ಒಗ್ಗೂಡಬೇಕು: ಕುಂಚಿಟಗ ಮಹಾಸಂಸ್ಥಾನ ಮಠದ ಡಾ. ಶ್ರೀ ಹನುಮಂತನಾಥಸ್ವಾಮೀಜಿ ಕರೆ

21 Mar 2018 6:48 PM |
1008 Report

ಕೊರಟಗೆರೆ ಮಾ. :- ಸಮುದಾಯ ಒಗ್ಗೂಡಲು ಸಂಘಟನೆಗಳು ಬಲಗೊಳ್ಳಬೇಕು ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು. ತಾಲೂಕಿನ ವಡ್ಡಗೆರೆ ವೀರನಾಗಮ್ಮ ದೇವಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗರ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಸಂಘಗಳನ್ನು ಸ್ಥಾಪಿಸಿದರೆ ಸಮುದಾಯ ಸಂಘಟನೆಯಾಗುವುದುದಿಲ್ಲ ಇದಕ್ಕಾಗಿ ನಿಸ್ವಾರ್ಥತೆಯಿಂದ ಹೋರಾಡಬೇಕು ಯಾವುದೇ ರಾಜಕೀಯ ಅಸ್ತಕ್ಷೇಪವಿಲ್ಲದೇ ಸಮುದಾಯವನ್ನು ಮುನ್ನಡೆಸಬೇಕು, ಯಾವುದೇ ಆಮಿಷಗಳಿಗೆ ಒಳಗಾಗದೇ ಸಮುದಾಯದ ಏಳ್ಗೆಗೆ ದುಡಿಯಬೇಕು ಎಂದು ಕರೆ ನೀಡಿದರು.

       ಕರ್ನಾಟಕರಾಜ್ಯ ಕುಂಚಿಟಿಗ ಸಂಘದ ರಾಜ್ಯಾಧ್ಯಕ್ಷ ವಿ. ವಿನಯ್ ಪೂಜಾರಿ ಮಾತನಾಡಿ ಕುಂಚಿಟಿಗ ಸಮುದಾಯ ಇನ್ನೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ ಸಕರ್ಾರ ಸಮುದಾಯವನ್ನು ನಿರ್ಲಕ್ಷಿಸಿದೆ ಸಮುದಾಯವವನ್ನು ಸಂಘಟನೆ ಮಾಡುವ ಹಿನ್ನೆಲೆಯಲ್ಲಿ ರಾಜ್ಯದ ಪ್ರತೀ ಹೋಬಳಿ ಕೇಂದ್ರದಲ್ಲೂ ಸಂಘವನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಿದ್ದು ಇದಕ್ಕಾಗಿ ಸದಸ್ಯತ್ವ ಅಭಿಯಾನವನ್ನೂ ಸಹ ಆಯೋಜಿಸಿದ್ದು ಸಮುದಾಯದ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
     ಈ ಸಂದರ್ಭದಲ್ಲಿ ವೀರನಾಗಮ್ಮ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶೆಟ್ಟಿಹಳ್ಳಿ, ನಾಗಭೂಷಣ್, ಉಪಾಧ್ಯಕ್ಷ ವಿ. ರಾಮಚಂದ್ರ, ಕಾರ್ಯದಶರ್ಿ ವಿ.ಕೆ ನಾಗರಾಜು, ದೇವಾಲಯದ ಪ್ರಧಾನ ಅರ್ಚಕ ವಿ.ಕೆ  ಶಿವಕುಮಾರ್, ಪೋಸ್ಟ್ ಮಂಜುನಾಥ್, ಕುಂಚಿಶ್ರೀ ಪತ್ತಿನ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಬಿ.ವಿ ನಾಗರಾಜು, ಮುಖಂಡರಾದ ವಿ.ವಿ ಶಿವಣ್ಣ, ಟಿ. ಅಜಯ್, ವಿ. ನಾಗೇಶ್, ವಿ.ಕೆ ಮಾರುತಿ, ವಿ.ಎಸ್ ಶಿವಕುಮಾರ್, ಕುಂಚಶ್ರೀವಿಜಯ್ ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)

   ರಾಜ್ಯ ಕುಂಚಿಟಗ ಸಂಘದ ತಾಲೂಕು ಘಟಕವನ್ನು ಎಲೆರಾಂಪುರ ಕುಂಚಿಟಗ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷ ಡಾ. ಶ್ರೀ ಹನುಮಂತನಾಥಸ್ವಾಮೀಜಿ ಉದ್ಘಾಟಿಸಿದರು. ರಾಜ್ಯಧ್ಯಕ್ಷ ವಿನಯ್ ಪೂಜಾರ್ ಸೇರಿದಂತೆ ಇತರರು ಇದ್ದರು. 

Edited By

Raghavendra D.M

Reported By

Raghavendra D.M

Comments