ಚಾಟಿ ಏಟು ತಿಂದ ಬಂಡಾಯಶಾಸಕರಿಗೆ ದೇವೇಗೌಡರ ಪಾದವೇ ಗತಿ..!!
ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಮನಸ್ಸಿನೊಳಗೆ ಏನಿದೆ ಎಂಬುದನ್ನು ನಾನು ಹೇಗೆ ಹೇಳಲಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದ ರಾಜ್ಯಸಭೆ ಚುನಾವಣೆ ವೇಳೆ ಅಡ್ಡಮತದಾನ ಮಾಡಿದ ಜೆಡಿಎಸ್‌ನ ಏಳು ಮಂದಿ ಶಾಸಕರ ವಿರುದ್ಧ ದೂರು ನೀಡಿ ಎರಡು ವರ್ಷವಾದರೂ ವಿಚಾರಣೆ ನಡೆಸದೆ ವಿಳಂಬ ಮಾಡಿದ್ದಾರೆ. ಈಗ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದಾರೆ. ಆದರೆ, ಈ ರೀತಿ ತಡಮಾಡಬಾರದು. ಸ್ಪೀಕರ್ ಕೋರ್ಟ್‌ನಲ್ಲಿ ಏನಾಗುತ್ತದೆ ಕಾದು ನೋಡೊಣ ಎಂದು ಹೇಳಿದರು.
ಮಾತುಕತೆಗೆ ಸಿದ್ಧ ಎಂಬ ಶಾಸಕ ಹೆಚ್.ಸಿ. ಬಾಲಕೃಷ್ಟ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, ಈಗಾಗಲೇ ಅವರಿಗೆ ಸಾಕಷ್ಟು ಸಮಯವಕಾಶ ಕೊಟ್ಟಿದ್ದೆ. ಅವರನ್ನು ಅಮಾನತು ಮಾಡಲಾಗಿತ್ತು ಅಷ್ಟೆ. ಉಚ್ಛಾಟಿಸುವ ನಿರ್ಧಾರ ತೆಗೆದುಕೊಂಡಿರಲಿಲ್ಲ. ತಪ್ಪು ಒಪ್ಪಿಕೊಂಡ ಶಾಸಕ ಗೋಪಾಲಯ್ಯ ಅವರನ್ನು ಬಿಟ್ಟಿಲ್ಲವೆ. ಮೊದಲು ಸ್ಪೀಕರ್ ಕೋರ್ಟ್ ತೀರ್ಪು ಬರಲಿ ಎಂದರು.
Comments