ದೇವನಹಳ್ಳಿ ತಾಲ್ಲೂಕು ಚಪ್ಪರದಕಲ್ಲು ಗ್ರಾಮದಲ್ಲಿ ಜಿಲ್ಲಾ ಕಛೇರಿಗಳ ಸಂಕೀರ್ಣ ಕಟ್ಟಡ ಉದ್ಘಾಟನೆಯನ್ನು ಶ್ರೀ ಕಾಗೋಡು ತಿಮ್ಮಪ್ಪ
ದಿನಾಂಕ 22-3-2018 ಬೆಳಿಗ್ಗೆ 11-00 ಗಂಟೆಗೆ ದೇವನಹಳ್ಳಿ ತಾಲ್ಲೂಕು ಚಪ್ಪರದಕಲ್ಲು ಗ್ರಾಮದಲ್ಲಿ ಜಿಲ್ಲಾ ಕಛೇರಿಗಳ ಸಂಕೀರ್ಣ ಕಟ್ಟಡ ಉದ್ಘಾಟನೆಯನ್ನು ಶ್ರೀ ಕಾಗೋಡು ತಿಮ್ಮಪ್ಪ, ಮಾನ್ಯ ಕಂದಾಯ ಸಚಿವರು, ಕರ್ನಾಟಕ ಸರ್ಕಾರ, ಇವರು ನೆರವೇರಿಸುವರು ಹಾಗೂ 11-30 ಗಂಟೆಗೆ ದೊಡ್ಡಬಳ್ಳಾಪುರ ಟೌನ್ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಶ್ರೀ ಕೃಷ್ಣಬೈರೇಗೌಡ, ಮಾನ್ಯ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸುವರು. ಘನ ಉಪಸ್ಥಿತಿ ಶ್ರೀ ಡಾ|| ಎಂ.ವೀರಪ್ಪಮೊಯಿಲಿ, ಮಾನ್ಯ ಸಂಸತ್ ಸದಸ್ಯರು, ಚಿಕ್ಕಬಳ್ಳಾಪುರ ಕ್ಷೇತ್ರ, ಹಾಗೂ ಅಧ್ಯಕ್ಷತೆಯನ್ನು ಶಾಸಕ ಶ್ರೀ ಟಿ,ವೆಂಕಟರಮಣಯ್ಯ ವಹಿಸುವರು. ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
Comments