ಜೆಡಿಎಸ್ ಬಂಡಾಯ ಶಾಸಕರ ಭವಿಷ್ಯಕ್ಕೆ ಕೊಡಲಿ ಪೆಟ್ಟು ಕೊಡಲು ಸಜ್ಜಾದ ಜೆಡಿಎಸ್...!!
ಚುನಾವಣೆಗೂ ಮುನ್ನವೆ ನಾಗಮಂಗಲದಲ್ಲಿ ರಾಜಕಾರಣ ರಂಗೇರಿದ್ದು, ಚೆಲುವರಾಸ್ವಾಮಿರನ್ನು ಅಣಿಯಲು ಜೆಡಿಎಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಜೆಡಿಎಸ್ ಪಕ್ಷದಿಂದ ಬಂಡಾಯ ಸಾರಿ ಪಕ್ಷಕ್ಕೆ ದ್ರೋಹ ಬಗೆದ ಶಾಸಕನ ಭವಿಷ್ಯಕ್ಕೆ ಕೊಡಲಿ ಪೆಟ್ಟು ಕೊಡಲು ಸಜ್ಜಾಗಿದ್ದಾರೆ. ಸ್ವತಃ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಚೆಲುವರಾಸ್ವಾಮಿ ಸೇರಿದಂತೆ 7 ಜನ ಶಾಸಕರನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ.
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಹಾಲಿ ಶಾಸಕ ಜೆಡಿಎಸ್ ನ ಎನ್.ಚೆಲುವರಾಸ್ವಾಮಿ ವಿರುದ್ಧ ಸೋಲು ಅನುಭವಿಸಿದರು. ಇದೀಗ ಅದೇ ಚೆಲುವರಾಸ್ವಾಮಿ ಕಾಂಗ್ರೆಸ್ ಸೇರುತ್ತಿದ್ದು ನಾಟಕ ಮಾಡ್ತಿದ್ದಾರೆ. ವಿಚಿತ್ರ ಅಂದ್ರೆ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಶಿವರಾಮೇಗೌಡರು ಜೆಡಿಎಸ್ ನಲ್ಲಿ ಇದ್ದಾರೆ. ಅಭ್ಯರ್ಥಿಯಾಗಿ ಮಾಜಿ ಶಾಸಕ ಕಾಂಗ್ರೆಸ್ ನ ಸುರೇಶ್ ಗೌಡ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ಇತಿಹಾಸ ಇಲ್ಲದೇ ಇರೋದು ಚೆಲುವರಾಸ್ವಾಮಿಗೆ ಮೈನಸ್ ಪಾಯಿಂಟ್. ದೇವೇಗೌಡರಿಗೆ ಮೋಸ ಮಾಡಿ ಕಾಂಗ್ರೆಸ್‌ನ ಅಭ್ಯರ್ಥಿಗೆ ಮತ ಹಾಕಿದ್ರು ಅನ್ನೋ ಮಾತು ಮನೆ ಮನಗಳಲ್ಲಿ ಪ್ರತಿಧ್ವನಿಸುತ್ತಿರೋದು ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಅವರಿಗೆ ಪ್ಲಸ್ ಪಾಯಿಂಟ್. ಚೆಲುವರಾಸ್ವಾಮಿ ಹಣ ಖರ್ಚು ಮಾಡೋದ್ರಲ್ಲಿ ಸುರೇಶ್ ಗೌಡ ಅವರನ್ನು ಮೀರಿಸಬಹುದು. ಆದರೆ ಗೆಲುವು ಕಷ್ಟ ಅನ್ನೋ ಪರಿಸ್ಥಿತಿ ಇದೆ.
ನಾಗಮಂಗಲ ಕ್ಷೇತ್ರದಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಶಾಸಕ ಚಲುವರಾಯಸ್ವಾಮಿ ಹೊಸ ತಂತ್ರ ಮಾಡಿದ್ದಾರೆ. ತನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ 3,500 ಕೋಟಿ ಅನುದಾನ ಹಾಗೂ ಅಭಿವೃದ್ದಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಬೀದಿ ನಾಟಕ ಪ್ರದರ್ಶನದ ಮೊರೆ ಹೋಗಿದ್ದಾರೆ. ಮುಂದಿನ 15 ದಿನಗಳ ಕಾಲ ಕ್ಷೇತ್ರದ ಹಳ್ಳಿ ಹಳ್ಳಿಗೂ ತೆರಳಿ ಈ ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಮತದಾರನನ್ನು ಸೆಳೆಯಲು ಚೆಲುವರಾಯಸ್ವಾಮಿ ತಂತ್ರಗಾರಿಕೆ ಮಾಡಿದ್ದಾರೆ. ಚೆಲುವರಾಯಸ್ವಾಮಿ ಏನೇ ನಾಟಕ ಮಾಡಿದರು ಸೋಲು ಅವರಿಗೆ ಕಟ್ಟಿಟ್ಟ ಬುತ್ತಿ ಎಂಬುದು ನಿಜವಾದ ಸಂಗತಿ. ಶತಾಯಗತಾಯ ಚೆಲುವರಾಯಸ್ವಾಮಿಗೆ ಮಣ್ಣು ಮುಕಿಸಲು ಮುಂದಾಗಿರುವ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಈ ಬಾರಿ ನಾಗಮಂಗಲ ಕ್ಷೇತ್ರವನ್ನು ಜೆಡಿಎಸ್ ವಶಕ್ಕೆ ಪಡೆಯುವುದರಲ್ಲಿ ಎರಡು ಮತ್ತಿಲ್ಲ.
Comments