ಬಿಜೆಪಿಯ ಪ್ರಭಾವಿ ನಾಯಕ ಹಾಗೂ ದಲಿತ ಸಮುದಾಯದ ಮುಖಂಡ ಜೆಡಿಎಸ್ ಸೇರ್ಪಡೆ...!!



ದಲಿತರ ಸ್ವಾಭಿಮಾನದ ಸಂಕೇತವಾಗಿರುವ ಬಿಎಸ್ಪಿ ಪಕ್ಷ ಜೆಡಿಎಸ್ ಗೆ ಬೆಂಬಲ ಕೊಟ್ಟ ಮೇಲೆ ಹಲವಾರು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಜೆಡಿಎಸ್ ಸೇರಲು ಉತ್ಸುಕರಾಗಿದ್ದಾರೆ.
ದಲಿತ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಮಾಡಲು ಜೆಡಿಎಸ್ ಪಕ್ಷ ಪಣ ತೊಟ್ಟು ಆ ಮೂಲಕ ದಲಿತ ಸಮುದಾಯಗಳಿಗೆ ರಾಜಕೀಯ ಶಕ್ತಿ ತುಂಬಿಸಲು ಹೊರಟಿರುವುದು ಆ ಸಮುದಾಯಗಳನ್ನು ಜೆಡಿಎಸ್ ಪಕ್ಷದತ್ತ ವಾಲುವಂತೆ ಮಾಡಿದೆ. ಇದರ ಮೊದಲ ಭಾಗವಾಗಿ ಪ್ರಭಾವಿ ಬಿಜೆಪಿ ನಾಯಕ ಹಾಗೂ ದಲಿತ ಸಮುದಾಯದ ಮುಖಂಡರಾದ ಗೋವಿಂದ ಕಾರಜೋಳ ಜೆಡಿಎಸ್ ಪಕ್ಷಕ್ಕೆ ಸೇರುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ಮುಗಿದಿದ್ದು ಮುಂದಿನ ವಾರದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಮೋಸ ಮಾಡಿ ಚುನಾವಣೆಯಲ್ಲಿ ಸೋಲಿಸಿದ ವಿಷಯ ದಲಿತರು ಇನ್ನೂ ಮರೆತಿಲ್ಲ. ದಲಿತರನ್ನು ಬರಿ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರಿಗೆ ಸಿಗಬೇಕಾದ ನ್ಯಾಯಸಮ್ಮತ ಸ್ಥಾನ ಕೊಡದೇ ಬರಿ ಮೂಗಿಗೆ ಬೆಣ್ಣೆ ಹಚ್ಚುತ್ತಿರುವ ಕಾಂಗ್ರೆಸ್ ವಿರುದ್ಧ ಈ ಬಾರಿ ಸೇಡು ತೀರಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಇನ್ನು ಬಿಜೆಪಿ ಪಕ್ಷದ ವಿಷಯಕ್ಕೆ ಬರುವುದೇ ಬೇಡ. ಬಿಜೆಪಿ ಪಕ್ಷದ ಹಾಗೂ ಅದರ ನಾಯಕರ ನಡವಳಿಕೆಗಳು ಅದು ದಲಿತರ ವಿರೋಧಿ ಪಕ್ಷವೆಂದೇ ಬಿಂಬಿತವಾಗಿದೆ. ಬಿಜೆಪಿ ತನಗೆ ರಾಜ್ಯಸಭೆಯಲ್ಲೂ ಪೂರ್ಣ ಬಹುಮತ ಸಿಕ್ಕರೆ ಮೀಸಲಾತಿಯನ್ನೇ ತೆಗೆಯಲು ಯೋಚಿಸುತ್ತಿದೆ ಅದಕ್ಕೆ ಪೂರಕವಾಗಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರು ಈಗಾಗಲೇ ಸಂವಿಧಾನ ಬದಲಾವಣೆ ಮಾಡುವ ಮಾತಾಡುತ್ತಿದ್ದಾರೆ. ದಲಿತ ಯುವಕರನ್ನು ತನ್ನ ಹೋರಾಟಗಳಿಗೆ ಬಳಸಿಕೊಂಡು ಪಕ್ಷದ ಸ್ಥಾನ ಮಾನ ಮಾತ್ರ ಮೇಲ್ವರ್ಗದ ವ್ಯಕ್ತಿಗಳಿಗೆ ಮೀಸಲಿಟ್ಟಿರುವ ಬಿಜೆಪಿ ಪಕ್ಷ ಅಸ್ಪೃಶ್ಯತೆ ಹಾಗೂ ಜಾತಿ ಪದ್ದತಿಯನ್ನು ಬೆಂಬಲಿಸುವ ಮನಸ್ಥಿತಿ ಹೊಂದಿದೆ. ಈ ಎಲ್ಲಾ ಕಾರಣಗಳಿಗೆ ಹಲವಾರು ದಲಿತ ಮುಖಂಡರು ಆ ಸಮುದಾಯಗಳ ಒತ್ತಾಯಕ್ಕೆ ಮಣಿದು ಜೆಡಿಎಸ್ ಪಕ್ಷದತ್ತ ಮುಖ ಮಾಡಿದ್ದಾರೆ ಮತ್ತು ಗೋವಿಂದ ಕಾರಜೋಳ ಅವರ ಸೇರ್ಪಡೆ ಅದರ ಮೊದಲ ಭಾಗವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದಲಿತ ನಾಯಕರು ಜೆಡಿಎಸ್ ಪಕ್ಷ ಸೇರ್ಪಡೆ ಆಗುವ ಮಾತುಕತೆ ನಡೆಸುತ್ತಿರುವುದು ಮಾತು ಈ ಎಲ್ಲಾ ಬೆಳವಣಿಗಳಿಂದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಬೆಚ್ಚಿ ಬಿದ್ದಿವೆ ಎಂದು ಮೂಲಗಳು ತಿಳಿಸಿವೆ.
Comments