ಗುದ್ದಲಿ ಪೂಜೆ, ಶಂಕುಸ್ಥಾಪನೆ ನಡುವೆ ಮಾತಿನ ಚಕಮಕಿ ಶಾಸಕರು ಮತ್ತು ಸದಸ್ಯರ ನಡುವೆ
ದೊಡ್ಡಬಳ್ಳಾಪುರ ನಗರದ ಎಲ್ಲಾ ವಾರ್ಡ್ ಗಳಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ಗುದ್ದಲಿ ಪೂಜೆ, ಶಂಕುಸ್ಥಾಪನೆಯನ್ನು ತರಾತುರಿಯಲ್ಲಿ ನಡೆಸಲಾಯಿತು, ಶಾಸಕ ಟಿ. ವೆಂಕಟರಮಣಯ್ಯ, ನಗರಸಭೆ ಅಧ್ಯಕ್ಷರಾದ ಶ್ರೀ ತ.ನ.ಪ್ರಭುದೇವ್, ಉಪಾಧ್ಯಕ್ಷರಾದ ಜಯಲಕ್ಷ್ಮಿ ನಟರಾಜ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್.ಎಸ್ ಶಿವಶಂಕರ್ ಮತ್ತು ಎಲ್ಲಾ ನಗರಸಭೆ ಸದಸ್ಯರುಗಳು, ಪೌರಾಯುಕ್ತರಾದ ಆರ್. ಮಂಜುನಾಥ, ಇಂಜಿನಿಯರ್ ಗಳು, ಅಧಿಕಾರಿಗಳು ಭಾಗವಹಿಸಿದ್ದರು. ಇದೇ ಸಮಯದಲ್ಲಿ 7ನೇ ವಾರ್ಡ್ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಶಾಸಕರು ಮತ್ತು ಸ್ಥಳೀಯ ನಗರಸಭೆ ಸದಸ್ಯ ಕೆ.ಬಿ. ಮುದ್ದಪ್ಪ ನಡುವೆ ಮಾತಿನ ಚಕಮಕಿ ನಡೆಯಿತು, ಸ್ಥಳೀಯ ಚುನಾಯಿತ ಸದಸ್ಯನಿಗೆ ಈ ಕುರಿತು ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದರು, ಮುಖ್ಯಮಂತ್ರಿ ಮತ್ತು ಶಾಸಕರ ಅನುದಾನದಡಿ ಕಾಮಗಾರಿ ಶಂಕುಸ್ಥಾಪನೆ ಮಾಡಿಯೇ ತೀರುತ್ತೇವೆ ಎಂದ ಶಾಸಕರಿಗೆ ಸದಸ್ಯ ಮುದ್ದಪ್ಪ ಮತ್ತು ಸ್ಥಾಯಿಸಮಿತಿ ಅಧ್ಯಕ್ಷ ಶಿವಶಂಕರ್ ವಿರುದ್ಧ ಹರಿಹಾಯ್ದರು.
ಪ್ರಜೆಗಳ ಹಣದಿಂದ ನಡೆಯುವ ಕೆಲಸಗಳು ವೈಜ್ಞಾನಿಕವಾಗಿರಲಿ, ಈ ಮುಂಚಿನ ಕಾಮಗಾರಿಗಳಂತೆ ಮೊದಲು ರಸ್ತೆಗಳನ್ನ ಡಾಂಬರು ಅಥವ ಕಾಂಕ್ರಿಟ್ ಮಾಡಿಸಿ ಆನಂತರ ಚರಂಡಿ ಕೆಲಸ ಮಾಡಲು ಅಗಿಸಿ ನೀರಿನ ಪೈಪ್ ಹಾಕಲು ಒಡೆಸಿ ರಸ್ತೆಗಳನ್ನ ಮೊದಲಿದ್ದ ಸ್ಥಿತಿಗೇ ತಂದಿರಿಸಿದರೆ ಜನ ಕ್ಷಮಿಸೊಲ್ಲ.. ಕೆಲಸ ನಡೆದಷ್ಟೂ ಕಮಿಷನ್ ಬರುತ್ತೆ ಅನ್ನೋ ಜನಸಾಮಾನ್ಯರ ಅಭಿಪ್ರಾಯಕ್ಕೆ ಪುಷ್ಟಿ ಕೊಟ್ಟಂತಾಗುತ್ತೆ ಎಂದು ಅಲ್ಲಿ ಹಾಜರಿದ್ದ ಗಾಳಿಪಟ ಪ್ರಕಾಶ್ ತಿಳಿಸಿದರು.
Comments