22ನೇ ಮಾರ್ಚ್ 2018ರ ಗುರುವಾರದಂದು ನಗರದ ವಿವಿದ ಕಡೆಯಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1039ನೇ ಜಯಂತೋತ್ಸವ





22ರ ಗುರುವಾರ ಬೆಳಿಗ್ಗೆ 9ಕ್ಕೆ ದೇವಾಂಗ ಮಂಡಲಿಯಲ್ಲಿ ಅಭಿಷೇಕ,ಪೂಜೆಯೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ, ಹತ್ತು ಘಂಟೆಗೆ ತಾಲ್ಲೂಕು ಕಛೇರಿಯಲ್ಲಿ ಪೂಜೆ, 11ಘಂಟೆಗೆ ಮುಖ್ಯರಸ್ತೆಯಲ್ಲಿರುವ ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ [ರಿ.] ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1039ನೇ ಜಯಂತೋತ್ಸವ ಪೂಜೆ ಮತ್ತು ಜನಾಂಗದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮದ್ಯಾನ್ಹ 12ಕ್ಕೆ ಶಾಂತಿನಗರದ 7ನೇ ಕ್ರಾಸ್ ನಲ್ಲಿರುವ ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿವತಿಯಿಂದ 9ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮ ಇರುತ್ತದೆ. ಸಂಜೆ ನಾಲ್ಕು ಗಂಟೆಗೆ ತಾಲ್ಲೂಕು ಕಛೇರಿಯಿಂದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ, 7ಕ್ಕೆ ನಗರದ ಸಿನಿಮಾ ರಸ್ತೆಯಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ, ಈ ಎಲ್ಲ ಕಾರ್ಯಕ್ರಮಗಳಿಗೂ ಸಮಸ್ತ ನೇಕಾರ ಬಾಂಧವರು ಭಾಗವಹಿಸಲು ಕೋರಲಾಗಿದೆ.
Comments