ಕಾಲೇಜು ಚುನಾವಣಾ ರಂಗದಲ್ಲೂ ಜಯಭೇರಿ ಬಾರಿಸಿದ ಜೆಡಿಎಸ್
ಇಡೀ ಭಾರತ ದೇಶದಲ್ಲೇ ಅತ್ಯಂತ ಪಾಶ್ ಕಾಲೇಜುಗಳಲ್ಲಿ ಒಂದಾದ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಗರ್ಲ್ಸ್ ಕಾಲೇಜಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗು ಜೆಡಿಎಸ್ ಮೂರೂ ಪಕ್ಷಗಳ ಪರ-ವಿರೋಧ ಚರ್ಚೆ ನಡೆದಿತ್ತು. ಬಿಜೆಪಿಯ ಪ್ರತಿನಿಧಿಯಾಗಿ ಮೇಘಾ ಶರ್ಮ ಹಾಗು ಕಾಂಗ್ರೆಸ್ ಪ್ರತಿನಿಧಿಯಾಗಿ ಶಿಲ್ಪಿ ಸಿನ್ಹಾ ರಾಯ್ ವಾದ ಮಂಡಿಸಿದ್ದರು. ಇವರಿಬ್ಬರನ್ನೂ ಭಾರೀ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದು ಜೆಡಿಎಸ್ ನ ಪ್ರತಿನಿಧಿ ಶ್ರುತಿ.
ಜೆಡಿಎಸ್ ನ ಪ್ರತಿನಿಧಿಯಾಗಿ ಶೃತಿ ಎಂಬ 24 ವರ್ಷದ ವಿಧ್ಯಾರ್ಥಿನಿ ಭಾಗವಹಿಸಿದ್ದು, ಕುಮಾರಸ್ವಾಮಿಯವರು ಹೇಗೆ ‘ಅಣ್ಣ’ ಎಂಬ ನಾಮಾಂಕಿತ ಪಡೆದರೋ, ಅದೇ ರೀತಿ ಆಕೆಯೂ ಕೂಡ ತನ್ನ ಹೆಸರನ್ನು ‘ಅಕ್ಕ’ ಎಂದು ಕರೆದುಕೊಂಡು ಜೆಡಿಎಸ್ ಪರ ವಾದ ಮಂಡಿಸಿದ್ದರು. ಕುಮಾರಸ್ವಾಮಿ ಅವರ ನಿಜ ಜೀವನ ಶೈಲಿಯನ್ನೇ ಅಳವಡಿಸಿಕೊಂಡ ಶ್ರುತಿ ಅವರು ಕುಮಾರಸ್ವಾಮಿ ಅವರಂತೆಯೇ ನಿಮ್ಮ ಕುಟುಂಬದಲ್ಲಿ ಒಬ್ಬರಂತೆ, ನಿಮ್ಮ ಮನೆ ಮಗಳಾಗಿ, ನಿಮ್ಮ ‘ಅಕ್ಕ’ನಾಗಿ ದುಸಿಯುತ್ತೇನೆ ಎನ್ನುವ ಸಂದೇಶ ಸಾರುವ ಮೂಲಕ ಎಲ್ಲರ ಮನಸ್ಸು ಗೆದ್ದರು.
ಚುನಾವಣೆಯ ಅಂಕಿ-ಅಂಶಗಳು:
ಒಟ್ಟಾರೆ ಕಾಲೇಜ್ ವಿಧ್ಯಾರ್ಥಿನಿಯರ ಮತಗಳು : 155
ಜೆಡಿಎಸ್ ಪಡೆದ ಮತಗಳು : 86
ಕಾಂಗ್ರೇಸ್ ಪಡೆದ ಮತಗಳು : 31
ಬಿಜೆಪಿ ಪಡೆದ ಮತಗಳು : 18
ಯಾರಿಗೂ ಹಾಕದ ಮತಗಳು (NOTA) : 20
ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಬಿಜೆಪಿಯವರಿಗೆ NOTA ಗಿಂತಲೂ ಕಡಿಮೆ ಮತ ಬಿದ್ದಿದ್ದು, ಬಿಜೆಪಿಯವರು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಇಡೀ ಭಾರತ ದೇಶದಲ್ಲೇ ಅತ್ಯಂತ ಪಾಶ್ ಕಾಲೇಜುಗಳಲ್ಲಿ ಒಂದಾದ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಜೆಡಿಎಸ್ ಗೆ ಅಧಿಕ ಮತ ಬಂದಿರುವುದು ರಾಜಕೀಯ ವಿಶ್ಲೇಷಕರಲ್ಲಿ ಆಶ್ಚರ್ಯ ಮೂಡಿಸುತ್ತಿದೆ. ಈ ಸಾರಿ ವಿದ್ಯಾವಂತ ಯುವಕ/ಯುವತಿಯರ ಆಯ್ಕೆ ‘ಜೆಡಿಎಸ್’ ಎಂಬುದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ.
Comments