ನಶಿಸಿ ಹೋಗುತ್ತಿರುವ ಕಾಮಣ್ಣನ ಮೂರ್ತಿ ತಿದ್ದುವ ಕಲೆ





ದೊಡ್ಡಬಳ್ಳಾಪುರ ನಗರಕ್ಕೆ ಕಾಮಣ್ಣನ ಮೂರ್ತಿ ಮಾಡುವ ಕಲೆ ಬಗ್ಗೆ ಒಂದು ಇತಿಹಾಸವೇ ಇದೆ, ಒಂದೈವತ್ತು ವರ್ಷ ಹಿಂದಕ್ಕೆ ನೋಡಿದರೆ ಊರಿನ ಪ್ರತೀ ಪೇಟೆ, ಗಲ್ಲಿಗಳಲ್ಲಿ ಕಾಮನ ಪೌರ್ಣಮಿಯಂದು ಕಾಮನ ದಹನ ಮಾಡಿ ಆ ಜಾಗದಲ್ಲಿ ಯುಗಾದಿ ಅಮಾವಾಸ್ಯೆಯಂದು ಕಾಮನ ಮೂರ್ತಿಯನ್ನು ತಣ್ಣಗೆ ಮಾಡಲು ಜೇಡಿ ಮಣ್ಣಿನಿಂದ ವಿವಿದ ಬಗೆಯ ಕಾಮನ ಮೂರ್ತಿಯನ್ನು ರಚಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಕಾಮಣ್ಣನ ದಹನ ಮತ್ತು ತಣ್ಣಗೆ ಮಾಡುವ ಕ್ರಿಯೆಯೇ ಇಲ್ಲದಂತಾಗುತ್ತಿದೆ. ಈಗ ಊರಿನ ರಂಗಪ್ಪ ಸರ್ಕಲ್ ಮತ್ತು ಏಳು ಸುತ್ತಿನ ಕೋಟೆಯಲ್ಲಿ ದೊಡ್ಡ ಮೂರ್ತಿಗಳನ್ನು ನೋಡಬಹುದು, ರಂಗಪ್ಪ ಸರ್ಕಲ್ ಬಳಿ ಮೂರ್ತಿಯನ್ನು ಮಾಡಲು 104 ವರ್ಷಗಳ ಹಿಂದೆ ಪ್ರಾರಂಭಿಸಿದರು, ಅದರಲ್ಲೂ ಶ್ರೀಮಾನ್ ಯಲ್ಲಪ್ಪನವರು 85 ವರ್ಷಗಳು ಇದೇ ಸರ್ಕಲ್ ಬಳಿ ಮೂರ್ತಿಯನ್ನು ತಿದ್ದುತ್ತಿದ್ದರು. ಈ ಬಾರಿ ಅವರ ನೆನಪಿಗಾಗಿ ಮೂರ್ತಿಯನ್ನು ತಿದ್ದಿ ವಿಶೇಷ ಪೂಜೆ ಏರ್ಪಡಿಸಿದ್ದರು.
Comments