ಸಿಎಂ ಸಿದ್ದರಾಮಯ್ಯ ನವರಿಗೆ ಶುರುವಾಗಿದೆ ಚುನಾವಣೆಯ ಭೀತಿ…ಏಕೆ ಗೊತ್ತಾ?
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತಿದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಯ ಹಾಗೂ ಸಾಕಷ್ಟು ಗೊಂದಲ ಮೂಡಿದೆಯಂತೆ. ಯಾಕೆ ಅಂತೀರ, ಹಾಗಾದ್ರೆ ಮುಂದೆ ಓದಿ….
ಹೌದು.., ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತಿದಂತೆಯೇ ಸಿಎಂ ಸಿದ್ದರಾಮಯ್ಯನವರು ಚುನಾವಣೆಯ ಭೀತಿಗೊಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಭರ್ಜರಿ ತಯಾರಿಯಲ್ಲಿದ್ದು , ರಣತಂತ್ರ ರೂಪಿಸುತ್ತಿವೆ . ಜೆಡಿಎಸ್ ವಿಕಾಸಪರ್ವ ಸಮಾವೇಶಕ್ಕೆ ಹರಿದು ಬರುತ್ತಿರುವ ಜನಸಾಗರ ಬೆಂಬಲ ಕಂಡು ಸಿದ್ದರಾಮಯ್ಯನವರಲ್ಲಿ ಭಯ ಮೂಡಿಸಿದೆ . ಅಲ್ಲದೆ ಅವರೇ ಮಾಡಿಸಿದ ಮೊದಲ ಸರ್ವೇಯಲ್ಲಿ ಜೆಡಿಎಸ್ ಪ್ರಬಲ ಹೆಚ್ಚಿದ್ದು, ಇದೀಗ ಚುನಾವಣೆಗೆ ಕೊನೆಯ ಸರ್ವೇ ಮಾಡುವಂತೆ ಮುಖ್ತಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಗುಪ್ತಚರ ಇಲಾಖೆಗೆ ಎರಡು ದಿನಗಳ ಹಿಂದೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ತಿಂಗಳ ಅಂತ್ಯದೊಳಗೆ ಕಡೆಯ ಸರ್ವೇ ಮುಗಿಸಿಕೊಡಬೇಕು. ಯಾವ ವಿಧಾನಸಭಾ ಕ್ಷೇತ್ರದಲ್ಲಿ ನಾನು ಹೋಗಬೇಕು ಹೇಳಿ? ಮೂಲ, ವಲಸಿಗ ಕಾಂಗ್ರೆಸ್ಸಿಗರ ನಡುವಿನ ಜಗಳ ಇದೆಯಾ? ಈ ಬಗ್ಗೆ ಶೀಘ್ರ ವರದಿ ಸಲ್ಲಿಸುವಂತೆ ಸಿಎಂ ಸೂಚಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಹಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಗುಪ್ತಚರ ಇಲಾಖೆ ಸಲಹೆ ನೀಡಿದ್ದು, ಬಹಳಷ್ಟು ಕ್ಷೇತ್ರಗಳಲ್ಲಿ ಸಿಎಂ ಹೋಗದಿದ್ದಲ್ಲಿ ಸೋಲು ಹತ್ತಿರವಾಗುತ್ತದೆ. ಕ್ಷೇತ್ರದಲ್ಲಿ ಮೂಲ, ವಲಸಿಗರ ಕಚ್ಚಾಟ ಇದೆ ಎಂದು ವರದಿಯಾಗಿದೆ. ಇದರಿಂದ ಸಿಎಂ ತೀವ್ರ ಗೊಂದಲಕ್ಕೀಡಾಗಿದ್ದು, ಹಾಗಾಗಿ ಅಂತಿಮ ಸರ್ವೇ ನಡೆಸುವಂತೆ ಗುಪ್ತಚರ ಇಲಾಖೆಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಇದೆಲ್ಲವನ್ನು ನೋಡುತ್ತಿದರೆ ಕಾಂಗ್ರೆಸ್ ಆಡಳಿತಕ್ಕೆ ಬೇಸತ್ತಿರುವ ನಾಡಿನ ಜನತೆ ಈ ಬಾರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಆಶೀರ್ವಧಿಸಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಮೂಲಗಳು ತಿಳಿಸಿವೆ.
Comments