ಹುಚ್ಚು ನಾಯಿ ಕಡಿತ ಹಸು ಸಾವು ರೈತ ಕಂಗಾಲು
ಕೊರಟಗೆರೆ ಮಾ :- ಹುಚ್ಚುನಾಯಿ ದಾಳಿಗೆ ರೈತನ ಸೀಮೆಹಸು ಬಲಿಯಾಗಿರುವ ಘಟನೆ ಕೊರಟಗೆರೆ ಹೊರವಲಯದಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ. ಪಟ್ಟಣದ ಊಡರ್ಿಗೆರೆ ಕ್ರಾಸ್ ಬಳಿಯ ರೈತ ನಂಜುಂಡಪ್ಪರಿಗೆ ಸೇರಿದ ಸೀಮೆಹಸುವಿಗೆ ಕಳೆದ ವಾರದ ಹಿಂದೆ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿತ್ತು, ಪಶುವೈದ್ಯರಿಂದ ಚಿಕಿತ್ಸೆ ನೀಡಿದ್ದರು ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೂರು ದಿನಗಳಿಂದ ಮೇವು ಸೇವಿಸಲಾಗಿದೆ ನಿತ್ರಾಣವಾಗಿ ಮೃತಪಟ್ಟಿದೆ.
ರೈತ 6 ತಿಂಗಳ ಗರ್ಭದರಿದ್ದ ಸೀಮೆಹಸುವನ್ನು 40ಸಾವಿರ ರೂಗೆ ಖರೀದಿ ಮಾಡಿ ಹೈನುಗಾರಿಕೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಚಿಂತನೆಯಲಿದ್ದು ಆದರೆ ಹಸು ಮೃತಪಟ್ಟಿರುವುದುದರಿಂದ ರೈ ಕಂಗಾಲಾಗಿದ್ದಾನೆ.
ಮೃತ ಹಸುವಿನ ವಾರಸುದಾರ ರೈತ ನಂಜುಂಡಪ್ಪ ಮಾತನಾಡಿ ಹಸುಗಳನ್ನು ಮೇಯಿಸಿಕೊಂಡು ಜೀವನ ಮಾಡುತ್ತಿದ್ದೆವು ಆದರೆ ಘಟನೆಯಿಂದ ದಿಕ್ಕು ತೋಚದಾಗಿದೆ ಎಂದರು. ಕೊರಟಗೆರೆ ಭಾಗದಲ್ಲಿ ಹುಚ್ಚು ನಾಯಿಗಳ ಹಾವಳಿ ಹೆಚ್ಚಿದ್ದು ಹಸು ಮೇಯುತ್ತಿರು ಸಂದರ್ಭದಲ್ಲಿ ನಾಯಿ ಕಚ್ಚಿದ್ದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಪ್ರಯೋಜನೆವಾಗದೇ ಹಸು ಮೃತಪಟ್ಟಿದ್ದು ಸಕರ್ಾರ ಯಾವುದಾರೂ ಅನುಧಾನದಲ್ಲಿ ನಮಗೆ ಸಹಾಯ ಮಾಡಬೇಕು ಎಂದು ಅವಲತ್ತುಕೊಂಡಿರು. (ಚಿತ್ರ ಇದೆ)
Comments