ಸಿಲಿಂಡರ್ ಸ್ಪೋಟ ತಪ್ಪಿದ ಅನಾಹುತ
ಕೊರಟಗೆರೆ ಮಾ. :- ಶಾಲೆಯ ಸಿಬ್ಬಂದಿ ಮತ್ತು ಗ್ಯಾಸ್ ವಿತರಕರ ನಿರ್ಲಕ್ಷದಿಂದ ಶಾಲೆಯ ಅಡುಗೆ ಕೋಣೆಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಘಟನೆ ಗುರುವಾರ ಮದ್ಯಾಹ್ನ ನಡೆದಿದೆ. ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊನ್ನಾರನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಗುರುವಾರ ಮದ್ಯಾಹ್ನ ಅಡುಗೆ ತಯಾರಿಸುವ ಸಂದರ್ಭದಲ್ಲಿಯೇ ಘಟನೆ ನಡೆಸಿದ್ದು ಸಿಲಿಂಡರ್ ಸ್ಪೋಟದ ರಭಸಕ್ಕೆ ಅಡುಗೆ ಕೋಣೆಯಲ್ಲಿದ್ದ ಅಡುಗೆ ಪರಿಕರಗಳು ಮತ್ತು ಅಡುಗೆ ತಯಾರಿಸುವ ಪಾತ್ರಗಳು ಚೆಲ್ಲಾಪಿಲ್ಲಿಯಾಗಿವೆ.
ಅಕ್ಷರ ದಾಸೋಹ ಸಿಬ್ಬಂದಿ ಗುರುವಾರ ಮದ್ಯಾಹ್ನದ ಬಿಸಿಯೂಟ ತಯಾರಿಸಲು ಸ್ಟೌವ್ ಹಚ್ಚಲು ಹೋದಾಗ ಗ್ಯಾಸ್ ಕಾಲಿಯಾಗಿದೆ ನಂತರ ಹೊಸ ಸಿಲಿಂಡರ್ ಅಳವಡಿಸಲು ಮುಂದಾಗಿದ್ದಾರೆ ಈ ಸಂದರ್ಭದಲ್ಲಿ ಸಿಲಿಂಡರ್ನಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಮುಂದಿನ ಅವಗಡದ ಬಗ್ಗೆ ಎಚ್ಚೇತ್ತುಕೊಂಡ ಸಿಬ್ಬಂಧಿ ತಕ್ಷಣ ಹೊರಬಂದು ಶಾಲೆಯಲ್ಲಿನ ವಿದ್ಯಾಥರ್ಿಗಳನ್ನು ಹೊರ ಕರೆತಂದ ನಂತರ ಸಿಲಿಂಡರ್ ಸ್ಪೋಟಗೊಂಡಿದ್ದು ಅದೃಷ್ಟವಶಾತ್ ದೊಡ್ಡ ಅವಗಡವೊಂದು ತಪ್ಪಿದಂತಾಗಿದೆ.
ಶಾಲೆಯಲ್ಲಿ 1ರಿಂದ 7ನೇ ತರಗತಿಯ ಒಟ್ಟು 82 ಜನ ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಿಂದಿನ ವರ್ಷವೂ ಇದೇ ಶಾಲೆಯಲ್ಲಿ ಸಿಲಿಂಡರ್ ಸ್ಪೋಟವಾಗಿ ಭಾರಿ ಅನಾಹುತ ತಪ್ಪಿತ್ತು. ಈ ವರ್ಷವು ಸಹ ಅದೇ ರೀತಿಯಲ್ಲಿ ಸ್ಪೋಟವಾಗಿದ್ದು ಯಾವುದೇ ಅಹಿತಕರ ಘಟನೆ ನಡೆದಿದೆ. ಗ್ಯಾಸ್ ಸಿಲಿಂಡ್ನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸದೇ ಏಜೆಸ್ಸಿಯವರು ನೀಡಿರುವುದೇ ಘಟನೆಗೆ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಕ್ಷರ ದಾಸೋಹದ ಸಹಾಯದ ನಿದರ್ೇಶಕ ಎಲ್. ಕಾಮಯ್ಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.(ಚಿತ್ರ ಇದೆ)
ಎಲ್. ಕಾಮಯ್ಯ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ
ಅನಿರೀಕ್ಷಿತವಾಗಿ ಘಟನೆ ನಡೆದಿದೆ ಇದರಲ್ಲಿ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ, ಅವಗಡದಿಂದ ಅಡುಗೆ ಪರಿಕರ, ಸ್ವೌವ್ ನಿಷ್ಕ್ರಿಯಗೊಂಡಿತ್ತು ಇದಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಿದ್ದು ಬಿಡಿಯೂಟಕ್ಕೆ ಎಂದಿನಂತೆ ನೀಡಲಾಗುವುದು, ಅಡುಗೆಯವರಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಜಾಗೃತೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.
Comments