ರಾಜ್ಯ ರಾಜಕೀಯದ ಅಖಾಡಕ್ಕೆ ಪಾದಾರ್ಪಣೆ ಮಾಡಲಿರುವ ಪ್ರಖ್ಯಾತ ಸ್ಟಾರ್ ನಟ..!!
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವರ್ ಸ್ಟಾರ್ ಕೈ ಜೊಡಿಸಿ ಕರ್ನಾಟಕ ಹಾಗೂ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ರಾಯಚೂರು, ಕೋಲಾರ, ತುಮಕೂರು, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪು ಜಿಲ್ಲೆಗಳಲ್ಲಿ ಪ್ರಚಾರ ನಡೆಸುತ್ತಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆ ಮಾತು ಈಗ ನಿಜವಾಗುತ್ತಿದೆ.
ಹೌದು.., ಎಲ್ಲವೂ ಅಂದುಕೊಂಡಂತೆ ಏಪ್ರಿಲ್ ಮೂರನೇ ವಾರ ಅಥವಾ ನಾಲ್ಕನೇ ವಾರ ತೆಲಗು ಸ್ಟಾರ್ ನಟ ಪವನ್ ಕಲ್ಯಾಣ್ ಜೆಡಿಎಸ್ ಪರ ಪ್ರಚಾರ ಆರಂಭಿಸಲಿದ್ದಾರಂತೆ. ತೆಲುಗು ಭಾಷಿಗರು ಹೆಚ್ಚಾಗಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಜಿಲ್ಲೆಗಳಲ್ಲಿ ಪವನ್ ಕಲ್ಯಾಣ ಪ್ರಚಾರ ಮಾಡಲಿದ್ದಾರೆ. ಜಾಗ್ವಾರ್ ಸಿನಿಮಾದ ಹೀರೋ ಎಚ್ ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ಪವನ್ ಕಲ್ಯಾಣ್ ಅವರ ಜೊತೆಗೆ ಇರಲಿದ್ದಾರಂತೆ. ಸದ್ಯ ಕುರುಕ್ಷೇತ್ರ ಚಿತ್ರದಲ್ಲಿರುವ ನಿಖಿಲ್ ಚುನಾವಣೆ ಘೋಷಣೆ ಆದ ನಂತರ ಪ್ರಚಾರದ ಅಖಾಡಕ್ಕಿಳಿಯಲಿದ್ದಾರೆ. ಈಗಾಗಲೇ ಬಿಎಸ್ಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ನೀಡಿರುವ ಜೆಡಿಎಸ್ ಈಗ ಪವನ್ ಕಲ್ಯಾಣ್ ಅವರನ್ನು ಕೂಡ ರಾಜ್ಯವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕರೆತಂದು ಆ ಮೂಲಕ ಒಂದಷ್ಟು ತೆಲುಗು ಭಾಷಿಕರು ಹೆಚ್ಚಾಗಿ ವಾಸ ಮಾಡುತ್ತಿರುವ ಪ್ರದೇಶಗಳ ಮತಗಳನ್ನು ಡೈವೋರ್ಟ್ ಮಾಡಿಕೊಳ್ಳುವಂತ ಗಮನ ಹರಿಸಿದ್ದು, ಇದು ಎಷ್ಟರ ಮಟ್ಟಿಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
Comments