ನಗರಸಭೆ ಸಾಮಾನ್ಯ ಸಭೆಯಲ್ಲಿ 16 ಕಣ್ಣಿನ ಬಾವಿ ಕುರಿತು ವಾಗ್ವಾದ
ದೂಡ್ಡಬಳ್ಳಾಪುರ ಹಳೆಯ ಬಸ್ ನಿಲ್ದಾಣದಲ್ಲಿರುವ 16 ಕಣ್ಣಿನ ಬಾವಿಯ ಸುತ್ತ ಕಾಂಪೌಂಡ್ ನಿರ್ಮಿಸಿ ಬೀಗವನ್ನು ನಗರಸಭೆಯಲ್ಲಿ ಇಟ್ಟುಕೊಳ್ಳುವುದು ಹಾಗೂ ಮೊಹರಂ ದಿನದಂದು ಬೀಗ ನೀಡಲು ಚರ್ಚಿಸಿ ನಿರ್ಣಯಿಸಲಾಗಿತ್ತು. ಆದರೆ ನಡಾವಳಿಯಲ್ಲಿ ಒಂದು ಬೀಗವನ್ನು ಅಂಜುಮಾನ್ ಸಂಘಟನೆಗೆ ನೀಡುವಂತೆ ತಪ್ಪಾಗಿ ನಮೂದಿಸಲಾಗಿದೆ, ಬಜರಂಗದಳದವರು ನಮ್ಮ ಸುಪರ್ದಿಗೂ ಒಂದು ಬೀಗ ನೀಡುವಂತೆ ಮನವಿ ಸಲ್ಲಿಸಿದ್ದು ಇದಕ್ಕೆ ಹೊಣೆ ಯಾರು ಎಂದು ಕೆ.ಹೆಚ್.ವೆಂಕಟರಾಜು ಆಕ್ಷೇಪ ವ್ಯಕ್ತಪಡಿಸಿದರು. ಈ ವೆಳೆಯಲ್ಲಿ ಅಧ್ಯಕ್ಷ ಪ್ರಭುದೇವ್ ಸದಸ್ಯ ವೆಂಕಟರಾಜು ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಎರಡೂ ಬೀಗದ ಕೈ ನಗರಸಭೆಯಲ್ಲೇ ಇಟ್ಟುಕೊಳ್ಳಲು ತೀರ್ಮಾನಕ್ಕೆ ಬರಲಾಯಿತು.
Comments