ಜೆ.ನರಸಿಂಹಸ್ವಾಮಿ, ಅನಿಲ್ ಕುಮಾರ್ ಗೌಡ, ರವಿ ಮಾವಿನಕುಂಟೆ ಟಿಕೆಟ್ ಪೈಪೋಟಿ ಬಿಜೆಪಿಯಲ್ಲಿ,
ಕಾಂಗ್ರೆಸ್ ಮುಕ್ತ ಮಾಡುವ ನಿಟ್ಟಿನಲ್ಲಿ ದಿಲ್ಲಿ ಬಿಜೆಪಿ ಹೈಕಮಾಂಡ್ ಈಗ ಕರ್ನಾಟಕದತ್ತ ಗಮನ ಕೊಟ್ಟಿದೆ, ತಮ್ಮ ಮಿಷನ್150 ಗುರಿಯನ್ನು ಮುಟ್ಟಲು ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸೋಲಿಸಲು ಸರ್ವ ಪ್ರಯತ್ನಗಳನ್ನೂ ಮಾಡಲಿದೆ. ಹೊಸಬರಿಗೆ ಮತ್ತು ಯುವಕರಿಗೆ ಆದ್ಯತೆ ನೀಡುವತ್ತಲೂ ನಿಟ್ಟಿನಲ್ಲಿ ಹೈಕಮಾಂಡ್ ಗಮನ ಹೊಸಬರಾದ ಅನಿಲ್ ಕುಮಾರ್ ಗೌಡ ಮತ್ತು ರವಿ ಮಾವಿನಕುಂಟೆ ಮೇಲಿದೆ. ಅಂತಿಮವಾಗಿ ಟಿಕೆಟ್ ಯಾರಿಗೆ ದೊರಕಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ, ಅನಿಲ್ ಕುಮಾರ್ ಗೌಡರಿಗೆ ಟಿಕೆಟ್ ನೀಡಿದರೆ ಬಹುಸಂಖ್ಯಾತ ಮತದಾರರಾಗಿರುವ ಒಕ್ಕಲಿಗರ ಮತಗಳನ್ನು ಸೆಳೆಯಬಹುದು. ಆಗ ಕಾಂಗ್ರೆಸ್ನಿಂದ ವೆಂಕಟರಮಣಯ್ಯ, ಜೆಡಿಎಸ್ನಿಂದ ಮುನೇಗೌಡ, ಬಿಜಿಪಿಯಿಂದ ಅನಿಲ್ ಕುಮಾರ್ ಗೌಡ ಆದರೆ ಒಕ್ಕಲಿಗರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಇಬ್ಬರ ನಡುವೆ ಮೂರನೆಯವರಿಗೆ ಲಾಭವಾಗುತ್ತಾ ಕಾದು ನೋಡಬೇಕೆ.
Comments