ಕುಮಾರಣ್ಣ ನನ್ನು ಕೊಂಡಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪರಸ್ಪರ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದಾರೆ. ಆದರೆ ಕುಮಾರಸ್ವಾಮಿಯ 20 ತಿಂಗಳ ಆಡಳಿತದ ಬಗ್ಗೆ ಚಾರ್ಜ್‌ಶೀಟ್ ಬಿಡುಗಡೆ ಮಾಡಲು ಸಾಧ್ಯವಿಲ್ಲ ಅಂತಹ ಉತ್ತಮ ಆಡಳಿತ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕುಮಾರಣ್ಣ ನನ್ನು ಕೊಂಡಾಡಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಗೆಳೆಯರ ಬಳಗ ವೃತ್ತದಲ್ಲಿ ವಿಕಾಸಪರ್ವ ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಾಲ್ಗೊಂಡರು. ನಂತರ ಮಾತನಾಡಿದ ಅವರು, ಈಗ ಮತ್ತೆ ಉತ್ತಮ ಆಡಳಿತ ನೀಡಬೇಕಾದರೆ ಬಹುಮತದ ಸರ್ಕಾರ ಬೇಕು ಪಟ್ಟಣದ ಬಡವರಿಗೂ ಅಕ್ಕಿ ಗೋಧಿ ಕೊಡುವ ಕೆಲಸವನ್ನು ಅಂದು ಮಾಡಿದ್ದೆ. ಇವರು ಈಗ ಅನ್ನಭಾಗ್ಯ ಎನ್ನುತ್ತಿದ್ದಾರೆ ಆ ಬಗ್ಗೆ ಚರ್ಚೆ ಮಾಡಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಬಿಬಿಎಂಪಿಯಲ್ಲಿ ನೈಸ್ ಬಗ್ಗೆ ಪದ್ಮನಾಭ ರೆಡ್ಡಿ ಮಾತಾಡ್ತಾರೆ. ಅಂದು ಕುಮಾರಸ್ವಾಮಿ ಕ್ಯಾಬಿನೆಟ್‌ನಲ್ಲಿ ಈ ವಿಚಾರ ತಂದಾಗ ಬಿಜೆಪಿ ಬೆಂಬಲ ಕೊಟ್ಟಿಲ್ಲ, ಇಲ್ಲದಿದ್ದರೆ ಅಂದೇ ಮಹಾವಂಚಕನಿಂದ ಭೂಮಿಯನ್ನು ವಾಪಸ್ ಪಡೆಯಬಹುದಿತ್ತು. ನೈಸ್ ಯೋಜನೆಯನ್ನೇ ಸರ್ಕಾರದ ಸುಪರ್ದಿಗೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ದರು. ಇದ್ಯಾವುದಕ್ಕೂ ಬಿಜೆಪಿ ಬೆಂಬಲ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Comments