ಶ್ರೀ ದೇವರ ದಾಸಿಮಯ್ಯನವರ ಜಯಂತೋತ್ಸವ ಪೂರ್ವಬಾವಿ ಸಭೆ
ದಿನಾಂಕ 22-3-2018ರ ಗುರುವಾರದಂದು ನಡೆಯಲಿರುವ ಶ್ರೀ ದೇವರ ದಾಸಿಮಯ್ಯನವರ ಜಯಂತೋತ್ಸವದ ಪ್ರಯುಕ್ತ ಇಂದು ತಾಲ್ಲೂಕು ಪಂಚಾಯತಿ ಕಾರ್ಯಲಯದ ಸಭಾಂಗಣದಲ್ಲಿ ಶಾಸಕ ಶ್ರೀ ಟಿ. ವೆಂಕಟರಮಣಯ್ಯನವರ ಅಧ್ಯಕ್ಷತೆಯಲ್ಲಿ ಪೂರ್ವಬಾವಿ ಸಭೆ ನಡೆಸಲಾಯಿತು, ಶಾಸಕರು ಮಾತನಾಡಿ 22 ರಂದು ದಾಸಿಮಯ್ಯನವರ ಮೆರವಣಿಗೆಯನ್ನು ಸಂಜೆ 4 ಘಂಟೆಗೆ ನಡೆಸಲು, ಸಭಾ ಕಾರ್ಯಕ್ರಮವನ್ನು ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲು ಸೂಚಿಸಿದರು. ಸಭೆಯಲ್ಲಿ ದೇವಾಂಗ ಮಂಡಲಿ ಅಧ್ಯಕ್ಷ ವಿ. ತಿಮ್ಮಶೆಟ್ಟಪ್ಪ ಮತ್ತು ಪದಾಧಿಕಾರಿಗಳು, ತಹಸೀಲ್ದಾರ್ ಮೋಹನ್, ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷ ಪಿ.ಸಿ. ಲಕ್ಷ್ಮಿನಾರಾಯಣ್ ಮತ್ತು ಪದಾಧಿಕಾರಿಗಳು, ದೇವಾಂಗ ಸಮುದಾಯದ ಹಲವಾರು ಸಂಘಟನೆಗಳ ಮುಖ್ಯಸ್ತರು ಹಾಜರಿದ್ದು ಸಲಹೆಗಳನ್ನು ನೀಡಿದರು. ಶ್ರೀ ಬಿ.ಜಿ. ಅಮರನಾಥ್ ಕಾರ್ಯಕ್ರಮ ನಿರೂಪಿಸಿದರು.
Comments