ತಿಪಟೂರು ಕ್ಷೇತ್ರದಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಲಿದೆ : ಎಚ್ ಡಿಕೆ ಭವಿಷ್ಯ
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ತಿಪಟೂರು ಕ್ಷೇತ್ರದಲ್ಲಿ ಸೆಡ್ಡು ಹೊಡೆಯಲು ಜೆಡಿಎಸ್ ತಂತ್ರ ರೂಪಿಸಿವೆ. ಮಾನ್ವಿಯಲ್ಲಿ ನಡೆದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ತಿಪ್ಪರಲಾಗ ಹಾಕಿದರೂ ಪರಮೇಶ್ವರ್ ಗೆಲ್ಲುವುದಿಲ್ಲ. ಅವರ ತಿಪಟೂರು ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ತಿಂಗಳು 30 ಜಿಲ್ಲೆಯ ರೈತರನ್ನು ವಿಧಾನಸಭೆಗೆ ಕರೆಸಿ ಕಾರ್ಯಕ್ರಮಗಳ ಬಗ್ಗೆ ಸಲಹೆ ಪಡೆದು ಸರ್ಕಾರ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಜನರ ದುಡ್ಡಲ್ಲಿ ಸರ್ಕಾರ ಪತ್ರಿಕೆ ಹಾಗೂ ಟಿವಿಗಳಿಗೆ ಲಕ್ಷಾಂತರ ಹಣ ಕೊಡುತ್ತಿದೆ. ಸಚಿವ ಎಂ.ಬಿ. ಪಾಟೀಲ್ ಟಿವಿ ಜಾಹೀರಾತಿನಲ್ಲಿ ನೀರಾವರಿ ಬಗ್ಗೆ ಮಾತಾಡ್ತಾರೆ. ಸಿದ್ದರಾಮಯ್ಯ ಭಾಷಣ ಮಾಡುವಾಗ ವೇದಿಕೆ ತುಂಬಾ ಹಸಿವು ಮುಕ್ತ ಕರ್ನಾಟಕ ಮಾಡಿದ್ದೇವೆ ಅಂತಾ ಡ್ಯಾನ್ಸ್ ಮಾಡ್ತಾರೆ. ಆದರೆ ಹಳ್ಳಿಗಳ ಜನರು ಸಾಯ್ತಾ ಇದ್ದಾರೆ ಎಂದು ದೂರಿದರು. ಸಿದ್ದರಾಮಯ್ಯ 1 ಲಕ್ಷದ 35 ಸಾವಿರ ಕೋಟಿ ಸಾಲ ಮಾಡಿ ಜನರ ಮೇಲೆ ಹಾಕಿದ್ದಾರೆ. ಶೌಚಾಲಯ ಮುಕ್ತ ಅಂತಾರೆ. ಆದರೆ ನಾವು ಪ್ರವಾಸ ಮಾಡುವ ವೇಳೆ ರಸ್ತೆ ಪಕ್ಕದಲ್ಲೇ ಜನ ಚೊಂಬು ಹಿಡ್ಕೊಂಡು ಕೂತಿರ್ತಾರೆ. ಸಿದ್ದರಾಮಯ್ಯ ಇದರ ಬಗ್ಗೆ ಯೋಚನೆ ಮಾಡಿದ್ದಾರಾ. ನೀರೇ ಇಲ್ಲದೆ ಶೌಚಾಲಯ ಕೊಟ್ರೆ ಜನ ಎಲ್ಲಿಗೆ ಹೋಗ್ತಾರೆ ಎಂದು ಪ್ರಶ್ನಿಸಿದರು.
Comments