ಬೆಂಕಿ ನಂದಿಸಲು ಹೋರಿ ರೈತ ಬೆಂಕಿಗಾಹುತಿ
ಕೊರಟಗೆರೆ ಮಾ. 12:- ಕಾಡಿಗೆ ಬೆಂಕಿ ಹಚ್ಚಿದ್ದ ಸಂದರ್ಭದಲ್ಲಿ ಬೆಂಕಿ ಜಮೀನಿಗೆ ಬರುತ್ತದೆ ಎಂದು ಬೆಂಕಿ ನಂದಿಸಲು ಹೋಗಿ ರೈತನೋರ್ವ ಬೆಂಕಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಕೋಳಾಲ ಹೋಬಳಿಯ ಡಿ. ನಾಗೇನಹಳ್ಳಿ ಗ್ರಾಮದ ವಾಸಿ ನಾರಾಯಣಪ್ಪ(68) ಮೃತ ರೈತ.
ಬೆಂಕಿಯಲ್ಲಿ ರೈತ ಸಿಲುಕಿಕೊಂಡಿರುವುದನ್ನು ಸ್ಥಳೀಯರು ಗಮನಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು ಅಗ್ನಿ ಶಾಮಕ ದಳ ಭೇಟಿ ಬೆಂಕಿ ನಂದಿಸಿದರೂ ರೈತ ಬೆಂಕಿಯಿಂದ ಮೃತಪಟ್ಟಿದ್ದಾನೆ. ಪಿಎಸ್ಐ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿ.ಪಂ ಸದಸ್ಯ ಶಿವರಾಮಯ್ಯ, ತಾ.ಪಂ ಸದಸ್ಯ ಬೋರಣ್ಣ, ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಹೆಚ್.ಕೆ ಮಹಾಲಿಂಗಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ, ರೈತನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಕೋಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
Comments