ಕೊರಟಗೆರೆಯಲ್ಲಿ ತಿಗಳರ ಸಮಾವೇಶ... ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಭಾರಿ ಶಾಸಕರಾಗಿದ್ದ ಮುದ್ದರಾಮಯ್ಯ ಪುತ್ತಳಿ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಪಿ.ಆರ್ ರಮೇಶ್ ಅನುಧಾನದ ಭರವಸೆ.
ಕೊರಟಗೆರೆ ಮಾ. :- ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ಸತತ ಮೂರು ಭಾರಿ ಆಯ್ಕೆ ಯಾಗಿರುವ ಮುದ್ದರಾಮಯ್ಯರ ಪುತ್ತಳಿಯನ್ನು ನಿರ್ಮಿಸಲು ನನ್ನ ಅನುಧಾನದಿಂದ ಹಣ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್ ರಮೇಶ್ ತಿಳಿಸಿದರು. ಪಟ್ಟಣದ ಜೆ.ಸಮುದಾಯ ಭವನದಲ್ಲಿ ಅಗ್ನಿ ವಂಶ ಕ್ಷತ್ರಿಯ ತಿಗಳರ ತಾಲೂಕು ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 40 ಲಕ್ಷ ಸಮುದಾಯವಿದ್ದರೂ ಸಮಾಜಿಕವಾಗಿ, ರಾಜಕೀಯವಾಗಿ ಇನ್ನೂ ಮುಖ್ಯವಾಹಿನಿಗೆ ಬಂದಿಲ್ಲ, ಬಹುತೇಕರು ಇನ್ನೂ ಸಮಾಜದೊಂದಿಗೆ ಹೊಂದಿಕಂಡು ಮುಖ್ಯವಾಹಿನಿಗೆ ಬಂದಿಲ್ಲ ಸಮುದಾಯ ಇನ್ನೂ ಹಿಂದುಳಿದ್ದು ಎಲ್ಲಾ ರಂಗದ ಅಭಿವೃದ್ಧಿಗೆ ಶಿಕ್ಷಣ ಅತ್ಯಾವಶ್ಯಕವಾಗಿದ್ದು ಎಲ್ಲರೂ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಅಗ್ನಿವಂಶ ಕ್ಷತ್ರಿಯ ತಿಗಳರ ಯುವಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಹೆಚ್ ಸರ್ವೇಶ್ ಮಾತನಾಡಿ ಸಮುದಾಯ ಮುಖ್ಯವಾಗಿ ವ್ಯವಸಾಯ ಮತ್ತು ವ್ಯಾಪಾರವನ್ನು ಅವಲಂಭಿಸಿದ್ದು ಸರ್ಕಾರದಿಂದ ಸಮುದಾಯಕ್ಕೆ ಯಾವುದೇ ಹೆಚ್ಚಿನ ಸೌಲಭ್ಯವನ್ನು ನೀಡಿಲ್ಲ ಸಣ್ಣ ಸಮುದಾಯ ಎಂದು ನಮ್ಮನ್ನು ನಿರ್ಲಕ್ಷಿಸಿದ್ದು ಸರ್ಕಾರ ನಮ್ಮ ಸಮುದಾಯಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಸಮುದಾಯ ಕಟ್ಟೇ ಯಜಮಾನರಿಗೆ, ಹಾಲಿ ಮತ್ತು ಮಾಜಿ ತಾ.ಪಂ, ಗ್ರಾ.ಪಂ ಸದಸ್ಯರು ಸೇರಿದಂತೆ ಇತರೆ ಜನಪ್ರತಿನಿಧಿಗಳಿಗೆ ಅಭಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲೂಕಿನ ಅಗ್ನಿವಂಶ ಕ್ಷತ್ರಿಯ ತಿಗಳ ಯುವಕರ ಸಂಘದ ಗೌರವಾದ್ಯಕ್ಷ ಜಿ.ಸಿ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು, ತಾಲೂಕು ಕಾರ್ಯದರ್ಶಿ ಆರ್. ರಮೇಶ್, ಉಪಾದ್ಯಕ್ಷ ಸುಕುಮಾರ್, ರಾಜ್ಯ ತಿಗಳ ಮಹಾಸಭಾದ ಅಧ್ಯಕ್ಷ ಸುಬ್ಬಣ್ಣ, ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಪ್ತು ನಿಗಮದ ಅಧ್ಯಕ್ಷ ರೇವಣ್ಣ ಸಿದ್ದಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿ.ಪಂ ಸದಸ್ಯ ಪುಟ್ಟಮ್ಮ ಅರ್ಜುನ್, ಬೆಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಎ.ಹೆಚ್ ಬಸವರಾಜು, ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಎ. ರಾಮಕೃಷ್ಣಯ್ಯ, ಮಾಜಿ ಗ್ರಾ.ಪಂ ಅಧ್ಯಕ್ಷರು ಆದ ಹಾಲಿ ಸದಸ್ಯ ನಾಗರಾಜು, ವಿಎಸ್ಎಸ್ಎನ್ ಅಧ್ಯಕ್ಷರು ಮತ್ತು ಭೂ ನ್ಯಾಯ ಮಂಡಳಿ ಅಧ್ಯಕ್ಷ ಮಂಜುನಾಥ್, ಮಂಡಳಿಯ ಸದಸ್ಯರಾದ ಉಪಾದ್ಯಕ್ಷ ಸುಕುಮಾರ್, ಸಹಕಾರ್ಯದರ್ಶಿ ಕೆ.ಆರ್ ಪ್ರಕಾಶ್, ನಿರ್ದೇಶಕಾರ ಜಿ.ಎನ್ ಸಿದ್ದಪ್ಪ, ಲಕ್ಷ್ಮೀಕಾಂತಯ್ಯ, ಕೆ.ಸಿ ರಂಗನಾಥ್, ಎಸ್. ಗಿರೀಶ್, ಕೆ.ಸಿ ವಿಜಯ್ ಕುಮಾರ್, ಜೆ.ಹೆಚ್ ಯೋಗೇಶ್ ಬಾಬು, ಟಿ.ಡಿ ಮಂಜುನಾಥ್, ಟಿ.ಜಿ ಶ್ರೀಧರ್, ಜಿ. ನರಸಿಂಹರಾಜು, ಆರ್. ಹನುಮಂತರಾಜು, ತೋವಿನಕೆರೆ ಹನುಮಂತರಾಜು, ವಡ್ಡಗೆರೆ ಹನುಮಂತಯ್ಯ, ರೆಡ್ಡಿಹಳ್ಳಿ ಗೋವಿಂದರಾಜು, ಜಿ.ಟಿ ರಂಗಣ್ಣ, ರಾಮಕೃಷ್ಣಪ್ಪ, ಆರ್.ಜಿ ಜಗಧೀಶ್ ಕುಮಾರ್, ಎ.ಪಿ ಜಗಧೀಶ್, ಮಲ್ಲೇಕಾವು ನಟರಾಜ್, ಅಕ್ಕಿರಾಂಫುರ ಮೂಡ್ಲಪ್ಪ, ರಾವುತ್ತನಹಳ್ಳಿ ಗಂಗಪ್ಪ ಇತರರು ಇದ್ದರು. (ಚಿತ್ರ ಇದೆ)
Comments