ಕಾಂಗ್ರೆಸ್ ಸರಕಾರದ ಜನ್ಮ ಜಾಲಾಡಿದ ಎಚ್ ಡಿಕೆ
ಜೆಡಿಎಸ್ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನ್ಮ ಜಾಲಾಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಆಗಿರುವುದನ್ನು ಗಮನಿಸಿದರೆ ನೈಸ್ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿರುವಂತಿದೆ.
ಈ ಬಾರಿ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಖೇಣಿ ಫಂಡಿಂಗ್ ಮಾಡುವಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಮೊದಲಿಂದಲೂ ಭ್ರಷ್ಟರಿಗೆ ಆಶ್ರಯ ನೀಡುತ್ತಾ ಬಂದಿದೆ. 'ಹಲವು ಯೋಜನೆ ಹೆಸರಲ್ಲಿ ಒಂದು ಲಕ್ಷದ ನಾಲ್ಕುನೂರು ಕೋಟಿ ರೂಪಾಯಿ ಸಾಲವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿದ್ದಾರೆ. ಇದನ್ನು ರಾಜ್ಯದ ಜನರು ತೀರಿಸಬೇಕು. ಸಿದ್ಧರಾಮಯ್ಯ ತೀರಿಸೋದಿಲ್ಲ'. ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ಪತ್ರಿಕೆಗಳಿಗೆ ಏಳು ಪುಟಗಳ ಜಾಹೀರಾತು ನೀಡ್ತಾರೆ. ಈ ಜಾಹೀರಾತಿಗೆ ನೀಡಿದ ಹಣ ಯಾರ ಅಪ್ಪನದು?' 'ಸಿದ್ದರಾಮಯ್ಯ ಡ್ಯಾನ್ಸ್ ಮಾಡಿಕೊಂಡು ಸ್ಟೇಜ್ ಮೇಲೆ ಮಾತನಾಡ್ತಾರೆ. ಆದರೆ ಇವರು ನೀಡಿದ್ದು ಬರಭಾಗ್ಯ, ಅರೆಬರೆ ಕುಡಿಯುವ ನೀರಿನ ಭಾಗ್ಯ' 'ಸಸಿ ನೆಡುವ ನೆಪದಲ್ಲಿ ನೂರಾರು ಕೋಟಿ ನುಂಗಿಹಾಕಿದ್ದಾರೆ'. 'ಸಿದ್ದರಾಮಯ್ಯ ಶೌಚಾಲಯಮುಕ್ತ ಅಂತಾರೆ. ಇಂದಿಗೂ ಉತ್ತರ ಕರ್ನಾಟಕದಲ್ಲಿ ಬಯಲಲ್ಲೇ ಕುಳಿತಿರುತ್ತಾರೆ. ಇವರು ನೋಡಿದರೆ ಕ್ರಾಂತಿ ಅಂತಿದ್ದಾರೆ. ಶೌಚಾಲಯಕ್ಕೆ ನೀರೇ ಕೊಡದಿದ್ದರೆ ಹೇಗೆ? 'ಪತ್ರಿಕೆಗಳಿಗೆ ಒಂದೇ ದಿನ ನೀರಾವರಿ ಇಲಾಖೆಯಿಂದ ಏಳರಿಂದ ಎಂಟು ಕೋಟಿ ನೀಡುತ್ತಿದ್ದಾರೆ.' 'ವಸತಿ ಸಚಿವ ನನ್ನಂತೆ ಕಪ್ಪಗಿಲ್ಲ. ಆದರೂ ಬಣ್ಣ, ಲಿಪ್ ಸ್ಟಿಕ್ ಹಾಕಿಸಿಕೊಂಡು ಜಾಹೀರಾತು ನೀಡುತ್ತಿದ್ದಾರೆ'.
Comments