ವಿಕಾಸಪರ್ವಕ್ಕೆ ಹರಿದು ಬಂದ ಜನಸಾಗರ ಕಂಡು ಬೆಚ್ಚಿ ಬಿದ್ದು ಭೀತಿಗೊಳಗಾಗಿರುವ ರಾಷ್ಟೀಯ ಪಕ್ಷಗಳು...!!



ಕರ್ನಾಟಕ ವಿಧಾನ ಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಹೀಯಾಳಿಸುತ್ತಿದ್ದ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ನ ವಿಕಾಸ ಪರ್ವ ಸಮಾವೇಶ ಕಂಡು ದಿಗ್ಬ್ರಮೆಗೊಳಗಾಗಿವೆ. ಜೆಡಿಎಸ್ ಕೇವಲ ಒಂದು ಪ್ರಾದೇಶಿಕ ಪಕ್ಷ ಎಂದು ಮಾತುಗಳನಾಡುತ್ತಿದ್ದ ವಿಪಕ್ಷಗಳಲ್ಲಿ ಕುಣಿಗಲ್ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ವಿಕಾಸಪರ್ವ ಸಮಾವೇಶಕ್ಕೆ ಹರಿದು ಬಂದ ಜನಸಾಗರ ಕಂಡು ಎದೆಯಲ್ಲಿ ನಡುಕ ಹುಟ್ಟುಕೊಂಡಿದೆ.
ರಾಜ್ಯದ ರೈತರ 51 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ಮೂಲಕ ನನ್ನ ರೈತರನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ವಿಕಾಸಪರ್ವದಲ್ಲಿ ಮಾತನಾಡಿದ ಅವರು, ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತಿರುವುದು ನಾನು ಮುಖ್ಯಮಂತ್ರಿಯಾಗಿ ಮೆರೆದಾಡಲು ಅಲ್ಲ, ರೈತರ ಮತ್ತು ರಾಜ್ಯದ ಜನತೆಯ ಕಷ್ಟಗಳನ್ನು ನಿವಾರಿಸಲು ನಾನು ಕೇಳುತ್ತಿದ್ದೇನೆ ಎಂದರು. ಸಿಎಂ ಸಿದ್ದರಾಮಯ್ಯನವರು ಮಾತೃ ಪೂರ್ಣ ಯೋಜನೆಯನ್ನು ಮಾಡುವ ಮೂಲಕ ಗರ್ಭಿಣಿ ಮಹಿಳೆಯರನ್ನು ಮೈಲು ಗಟ್ಟಲೆ ನಡೆಸುವ ಕಾರ್ಯಕ್ರಮವನ್ನು ಜನರಿಗೆ ನೀಡಿದ್ದಾರೆ. ನಮ್ಮ ಸರಕಾರವನ್ನು ಅಧಿಕಾರಕ್ಕೆ ತಂದರೆ ನಿಮ್ಮ ಮನೆ ಬಾಗಿಲಿಗೆ ಯೋಜನೆಗಳನ್ನು ತರುತ್ತೇನೆ. 6 ತಿಂಗಳಿಗೆ 36 ಸಾವಿರ ರೂಪಾಯಿಗಳ ಹಾಗೆ ತಾಯಂದಿರಿಗೆ ತಲುಪಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ನಾನು ಸಾಲ ಮಾಡಿ ಯಾವುದೇ ಯೋಜನೆಗಳನ್ನು ತರುವುದಿಲ್ಲ. ನಿಮ್ಮ ಹಣದಿಂದಲೇ ನಿಮಗೆ ಯೋಜನೆಗಳು ಸಮರ್ಪಕವಾಗಿ ದೊರೆಯುವಂತೆ ಮಾಡಲು ಯೋಜನೆಗಳನ್ನು ರೂಪಿಸಿದ್ದೇನೆ. ರೈತರು ಸಾಲಗಾರರಾಗದಂತೆ ತಡೆಯಲು ಕೃಷಿ ಕ್ಷೇತ್ರದಲ್ಲಿ ಹೊಸ ಬದಲಾವಣೆಯನ್ನು ತರುತ್ತೇನೆ ಎಂದು ಅವರು ಹೇಳಿದರು.ಹಳ್ಳಿಗಳಲ್ಲಿರುವ ಅವಿದ್ಯಾವಂತ ಯುವಕ, ಯುವತಿಯರಿಗೆ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಕೈಯಲ್ಲಿರುವ ಗಿಡ ನೆಡುವಂತಹ ಕೆಲಸವನ್ನು ಕೊಡಿಸುತ್ತೇನೆ. ಅವರಿಗೆ ತಿಂಗಳಿಗೆ 5 ಸಾವಿರ ಸಂಬಳವನ್ನು ನೀಡಿ 25 ವರ್ಷಗಳ ವರೆಗೆ ಈ ಕೆಲಸ ಅವರ ಬಳಿಯಲ್ಲಿಯೇ ಭದ್ರವಾಗಿರುವಂತೆ ಮಾಡುತ್ತೇನೆ ಎಂದು ಅವರು ಹೇಳಿದರು.
Comments